ಸ್ತನ್ಯ ಪಾನದಿಂದ ಕ್ಯಾನ್ಸರ್ ದೂರ

02Kush02
Published on

ಕುಶಾಲನಗರ: ತಾಯಂದಿರು ಎರಡು ವರ್ಷಗಳವರೆಗೆ ಸ್ತನ್ಯ ಪಾನ ಮಾಡಿಸಿದರೆ ಮಕ್ಕಳ ಆರೋಗ್ಯ ವೃದ್ಧಿಸುತ್ತದೆ. ಅಲ್ಲದೆ ಸ್ತನ ಕ್ಯಾನ್ಸರ್ ದೂರವಾಗುತ್ತದೆ ಎಂದು ಕುಶಾಲನಗರ ಸರ್ಕಾರಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಶಿವಕುಮಾರ್ ಹೇಳಿದರು.


ಕೊಡಗು ಜಿಲ್ಲಾಡಳಿತ, ಜಿಪಂ, ಕುಶಾಲನಗರ ತಾಪಂ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಹಯೋಗದೊಂದಿಗೆ ಗುರುವಾರ ಕುಶಾಲನಗರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ತನ್ಯಪಾನ ಮಾಡಿಸುವುದರಿಂದ ತಾಯಿಯ ತೂಕ ಇಳಿಯುತ್ತದೆ. ತಾಯಿ ಮಗುವಿನ ಬಾಂಧವ್ಯ ವೃದ್ಧಿಸುತ್ತದೆ. ಋತುಚಕ್ರ ಮುಂದೂಡುತ್ತದೆ. ಮಗುವಿನ ರೋಗ ನಿರೋಧಕ ಶಕ್ತಿಯೂ ವೃದ್ಧಿಸುತ್ತದೆ. ಆರು ತಿಂಗಳವರೆಗೆ ಮಗುವಿಗೆ ತಾಯಿ ಹಾಲು ಹೊರತಾಗಿ ಬೇರೇನೂ ಕುಡಿಸಬಾರದು ಎಂದು ಸಲಹೆ ನೀಡಿದರು.


ತಾಲೂಕು ಆರೋಗ್ಯಾಧಿಕಾರಿ ಡಾ.ಇಂದೂಧರ್, ಕುಶಾಲನಗರ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಧುಸೂದನ್, ವೈದ್ಯರಾದ ಡಾ.ಮೇಲಪ್ಪ, ಡಾ.ನಿವೇದಿತಾ, ಡಾ.ಭರತ್, ಎಚ್.ಕೆ.ಶಾಂತಿ, ಶುಶ್ರೂಷಕಿ ಇಂದಿರಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net