ಐಎಂಎ ನೇತೃತ್ವದಲ್ಲಿ ಸ್ತನ ಕ್ಯಾನ್ಸರ್​ ಕುರಿತು ಅರಿವಿನ ವಾಕಥಾನ್​

Breast_Cancer_Jatha_01
Published on

ತುಮಕೂರು: ಮಹಿಳೆಯರಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್​ ಕುರಿತು ಭಾರತೀಯ ವೈದ್ಯಕಿಯ ಸಂ ಜಿಲ್ಲಾ ಶಾಖೆ ಹಾಗೂ ಮಹಿಳಾ ವೈದ್ಯರ ಟಕದ ಸಹಯೋಗದಲ್ಲಿ ಭಾನುವಾರ ನಗರದಲ್ಲಿ ವಾಕಥಾನ್​ ಆಯೋಜಿಸಲಾಗಿತ್ತು.

ನಗರದ ಟೌನ್​ಹಾಲ್​ ವೃತ್ತದ ಬಳಿಯ ಐಎಂಎ ಮುಂಭಾಗದಿಂದ ತುಮಕೂರು ವಿಶ್ವವಿದ್ಯಾಲಯದವರೆಗೆ ಹಮ್ಮಿಕೊಂಡಿದ್ದ ಸ್ತನ ಕ್ಯಾನ್ಸರ್​ ಅರಿವು ಮೂಡಿಸುವ ವಾಕಥಾನ್​ಗೆ ಚಾಲನೆ ನೀಡಿದ ಸ್ತನ ಕ್ಯಾನ್ಸರ್​ ಗೆದ್ದಿರುವ ಡಾ.ಜಯಶ್ರೀ ಶಾ ಮಾತನಾಡಿ, ಮೊದಲ ಹಂತದಲ್ಲೇ ಕ್ಯಾನ್ಸರ್​ ರೋಗದ ಗುಣಲಕ್ಷಣಗಳನ್ನು ಪತ್ತೆ ಹಚ್ಚಿದರೆ, ಚಿಕಿತ್ಸೆ ಮೂಲಕ ಪೂರ್ಣವಾಗಿ ಸ್ತನ ಕ್ಯಾನ್ಸರ್​ ಗುಣಪಡಿಸಲು ಸಾಧ್ಯವಿದೆ. ನಾನು ಈ ರೋಗವನ್ನು ಆರಂಭದಲ್ಲೇ ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆ ಪಡೆದ ಪರಿಣಾಮ ಈ ರೋಗವನ್ನು ಜಯಿಸಲು ಸಾಧ್ಯವಾಗಿದೆ ಎಂದರು.

ಹೆಣ್ಣುಮಕ್ಕಳು ಈ ವಿಚಾರದಲ್ಲಿ ಮುಜುಗರ ಪಡದೆ ಸಣ್ಣಪುಟ್ಟ ವ್ಯತ್ಯಾಸಗಳು ಕಂಡುಬರುತ್ತಿದ್ದಂತೆ ತಪಾಸಣೆಗೊಳಪಡಬೇಕು. ಅದನ್ನು ಪ್ರಥಮ ಹಂತದಲ್ಲಿ ತಿಳಿದು ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು.

ಭಾರತೀಯ ವೈದ್ಯಕಿಯ ಸಂದ ಜಿಲ್ಲಾ ಶಾಖೆ ಕಾರ್ಯದರ್ಶಿ ಡಾ.ಪ್ರದಿಪ್​ಪ್ರಭಾಕರ್​, ಐಎಂಎ ಮಹಿಳಾ ಟಕದ ಅಧ್ಯೆ ಡಾ.ಮನೋನ್ಮಣಿ, ಕಾರ್ಯದರ್ಶಿ ಡಾ.ಅರ್ಚನಾ ಪ್ರದಿಪ್​, ಜಿಲ್ಲಾ ರೋಟರಿ ಕಾರ್ಯದರ್ಶಿ ಬಿಳಿಗೆರೆ ಶಿವಕುಮಾರ್​, ಡಾ.ಕೆ.ಪಿ.ಸುರೇಶ್​ಬಾಬು, ಡಾ.ಎಸ್​.ಜಿ.ಪರಮೇಶ್ವರಪ್ಪ, ಡಾ.ಹೇಮಾಭೂಷಣ್​ ಮತ್ತಿತರರು ಉಪಸ್ಥಿತರಿದ್ದರು.

ಪ್ರಮುಖ ಬೀದಿಗಳಲ್ಲಿ ಜಾಥಾ: ನಗರದ ಟೌನ್​ ಹಾಲ್​ ನಿಂದ ಆರಂಭಗೊಂಡ ವಾಕಥಾನ್​ನಲ್ಲಿ ಸಿದ್ದಗಂಗಾ ನರ್ಸಿಂಗ್​ ಕಾಲೇಜು ಹಾಗೂ ಶ್ರೀದೇವಿ ಸಮೂಹ ಸಂಸ್ಥೆಯ ವಿದ್ಯಾರ್ಥಿಗಳು ಹೆಜ್ಜೆಹಾಕಿದರು. ಬಿ.ಎಚ್​.ರಸ್ತೆ ಮೂಲಕ ಸಂಚರಿಸಿ ಸಾರ್ವಜನಿಕರಲ್ಲಿ ಸ್ತನ ಕ್ಯಾನ್ಸರ್​ ಬಗ್ಗೆ ಅರಿವು ಮೂಡಿಸಲಾಯಿತು. ಆರಂಭದಲ್ಲೇ ಪತ್ತೆ ಹಚ್ಚಿದರೆ ಸ್ತನ ಕ್ಯಾನ್ಸರ್​ ಗುಣಪಡಿಸುಬಹುದು ಎಂಬುದನ್ನು ಅರುಣಾ ನರ್ಸಿಂಗ್​ ಕಾಲೇಜು ವಿದ್ಯಾರ್ಥಿಗಳು ಬೀದಿನಾಟಕದ ಮೂಲಕ ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net