ಬಾಗಿಲು ಮುರಿದು ಮನೆ ಕಳುವು

Published on

ಕುದೂರು: ಪಟ್ಟಣದ ಲಕ್ಷ್ಮೀ ದೇವಿನಗರ ಬಡಾವಣೆಯ ಮನೆಯೊಂದರ ಬಾಗಿಲು ಒಡೆದು ಒಳ್ಳನುಗ್ಗಿದ ಕಳ್ಳರು ಬೀರುವಿನಲ್ಲಿದ್ದ 4 ಲ ರೂ. ಸೇರಿ ಚಿನ್ನಾಭರಣ ದೋಚಿದ್ದಾರೆ.

ಮನೆ ಮಾಲೀಕ ನರಸಿಂಹಸ್ವಾಮಿ ಅವರು ಅ.1ರಂದು ಮನೆಗೆ ಬೀಗ ಹಾಕಿಕೊಂಡು 4 ದಿನ ಪ್ರವಾಸಕ್ಕೆ ತೆರಳಿದ್ದಾಗ, ಮನೆಯ ಬಾಗಿಲು ಮೀಟಿ ಒಳನುಗ್ಗಿದ ಕಳ್ಳರು, ಬೀರುವಿನಲ್ಲಿದ್ದ 4 ಲಕ್ಷ ನಗದು, 41 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಕುದೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net