ಶೌರ್ಯ-ತ್ಯಾಗದ ಪ್ರತೀಕ

28ALD 01
ಅಳವಂಡಿ ಸಮೀಪದ ಭೈರಾಪುರದಲ್ಲಿ ಕ್ರಾಂತಿವೀರ ಭಗತ್‌ಸಿಂಗ್ ಜಯಂತಿ ಆಚರಿಸಲಾಯಿತು. ಪ್ರಮುಖರಾದ ಪರಶುರಾಮ, ಗಿಡ್ಡಪ್ಪ, ರಮೇಶ, ವಿನೋದ, ಪೀರಸಾಬ, ಹನುಮಂತಪ್ಪ, ದೇವೇಂದ್ರಪ್ಪ ಇತರರಿದ್ದರು.
Published on

ಅಳವಂಡಿ: ಭಗತ್ ಸಿಂಗ್ ಭಾರತದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಅವರ ಧೈರ್ಯ, ಸಾಹಸ ಮತ್ತು ದೇಶಪ್ರೇಮ ಎಲ್ಲರಿಗೆ ಸ್ಫೂರ್ತಿಯಾಗಿದೆ ಎಂದು ಭಗತ್‌ಸಿಂಗ್ ಯುವಕ ಮಂಡಳಿ ಅಧ್ಯಕ್ಷ ಗಿಡ್ಡಪ್ಪ ಕನಕಾಪುರ ಹೇಳಿದರು.

ಸಮೀಪದ ಭೈರಾಪುರದಲ್ಲಿ ಭಗತ್ ಸಿಂಗ್ ಯುವಕ ಮಂಡಳಿ ಆಯೋಜಿಸಿದ್ದ ಭಗತ್ ಸಿಂಗ್ ಜಯಂತಿ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

ಬ್ರಿಟಿಷರ ಕಪಿಮುಷ್ಟಿಯಿಂದ ದೇಶವನ್ನು ಮುಕ್ತಗೊಳಿಸಲು ಕ್ರಾಂತಿ ಮಾರ್ಗ ಅನುಸರಿಸಿದ್ದ ಭಗತ್‌ಸಿಂಗ್ ಹೋರಾಟ ಮನೋಭಾವನೆ ಯುವ ಜನತೆಗೆ

ಇಂದಿಗೂ ಪ್ರೇರಣೆಯಾಗಿದೆ. ಅವರ ಹೆಸರು ಶೌರ್ಯ ಮತ್ತು ತ್ಯಾಗದ ಪ್ರತೀಕವಾಗಿದೆ. ಇವರ ಧೈರ್ಯ, ದೇಶಭಕ್ತಿ ಇಂದಿಗೂ ಲಕ್ಷಾಂತರ ಜನರನ್ನು ಆಕರ್ಷಿಸುತ್ತಿದೆ. ಹೋರಾಟ ಮನೋಭಾವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪ್ರಮುಖರಾದ ಪರಶುರಾಮ ಮೆಕ್ಕಿ, ರಮೇಶ ಆವೊಜಿ, ವಿನೋದ ಶಶಿಮಠ, ಪೀರಸಾಬ ಬೆಳಗಟ್ಟಿ, ಹನುಮಂತಪ್ಪ ಆವೊಜಿ, ದೇವೇಂದ್ರಪ್ಪ ಪೂಜಾರ, ಮಲ್ಲಪ್ಪ ಮೆಕ್ಕಿ, ವೀರೇಶ ಶಶಿಮಠ, ಸಂತೋಷ ಹರ್ಲಾಪುರ, ರಮೇಶ ಹಾದಿಮನಿ, ಯಲ್ಲಪ್ಪ ಪೂಜಾರ, ಮಹಾಂತೇಶ ಹಂಚಿನಾಳ, ತಿರುಪತಿ ಸಿಂದೋಗಿ, ಕುಮಾರ ಸಸಿಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net