

ವಿಜಯವಾಣಿ ಸುದ್ದಿಜಾಲ ಧಾರವಾಡ
ವೀರರಾಣಿ ಬೆಳವಡಿ ಮಲ್ಲಮ್ಮನವರ ಶೌರ್ಯ, ಸಾಹಸ ಮಹಿಳಾ ಸಮಾಜಕ್ಕೆ ಮಾದರಿ ಎಂದು ವೈದ್ಯ ಡಾ. ಎಸ್.ಆರ್. ರಾಮನಗೌಡರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಜಿಲ್ಲಾ ಪಂಚಮಸಾಲಿ ಸಂಘದ ಮಹಿಳಾ ಘಟಕದಿಂದ ಇತ್ತೀಚೆಗೆ ಆಯೋಜಿಸಿದ್ದ ವೀರರಾಣಿ ಬೆಳವಡಿ ಮಲ್ಲಮ್ಮನವರ 401ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಷಯ ತಜ್ಞ ಮಹೇಶ ಚನ್ನಂಗಿ ಮಾತನಾಡಿ, ಶೈಕ್ಷಣಿಕ ಕ್ಷೇತ್ರಕ್ಕೆ ಲಿಂಗಾಯತ ಮಹನೀಯರ ಕೊಡುಗೆ ಅಪಾರ. ಸರ್ ಸಿದ್ದಪ್ಪ ಕಂಬಳಿ, ಅರಟಾಳ ರುದ್ರಗೌಡ, ಡೆಪ್ಯುಟಿ ಚನ್ನಬಸಪ್ಪ, ಎಂ.ಪಿ. ಪಾಟೀಲ, ಇತರರು ಶೈಕ್ಷಣಿಕ ಅಭಿವೃದ್ಧಿಗೆ ಸಲ್ಲಿಸಿದ ಸೇವೆ ಅನುಕರಣೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಲಲಿತಾ ಪಾಟೀಲ ಮಾತನಾಡಿ, ಸಂಘದ ನಿಯಮಗಳ ಅಡಿ ಹೆಚ್ಚೆಚ್ಚು ಮಹಿಳಾ ಸದಸ್ಯರನ್ನು ನೋಂದಾಯಿಸಿ, ಸಂಘದ ಬಲವರ್ಧನೆಗೆ ಶ್ರಮಿಸುತ್ತೇನೆ ಎಂದರು.
ರಾಜ್ಯ ಉಪಾಧ್ಯಕ್ಷೆ ರೇಣುಕಾ ಶಿರಗುಂಬಿ, ರಾಜು ಕರಕನ್ನವರ, ಎಸ್.ಎಚ್. ಪಾಟೀಲ, ಡಾ. ಎಚ್.ವಿ. ಬೆಳಗಲಿ, ಸಿ.ಎಸ್. ಪಾಟೀಲ, ಇತರರಿದ್ದರು. ಸುಧಾ ಕಬ್ಬೂರ ನಿರೂಪಿಸಿದರು. ಜಿ.ಜಿ. ದ್ಯಾವನಗೌಡರ ವಂದಿಸಿದರು.