ಅಗ್ರಹಾರ ಬೀದಿ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ರಥ ಸಮರ್ಪಣೆ : ಕೈಕಂಬ ಪೊಳಲಿ ದ್ವಾರದ ಬಳಿ ಶೋಭಾಯಾತ್ರೆಗೆ ಚಾಲನೆ

New Project
Published on

ಬಂಟ್ವಾಳ: ಏಳು ನೂರು ವರ್ಷಗಳ ಇತಿಹಾಸವಿರುವ ನಾವೂರು ಗ್ರಾಮದ ಅಗ್ರಹಾರ ಬೀದಿ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ 42 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಬ್ರಹ್ಮರಥದ ಶೋಭಾಯಾತ್ರೆ ಭಾನುವಾರ ಸಂಜೆ ನಡೆಯಿತು.

ಬಿ.ಸಿ.ರೋಡ್‌ನ ಕೈಕಂಬ ಪೊಳಲಿ ದ್ವಾರದ ಬಳಿ ದೇವಳದ ಪ್ರಧಾನ ಅರ್ಚಕ ಸುದರ್ಶನ್ ಬಲ್ಲಾಳ್ ಮಾರ್ಗದರ್ಶನದಲ್ಲಿ, ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ರಮಾನಾಥ ರೈ, ಧಾರ್ಮಿಕ ಪರಿಷತ್ ಸದಸ್ಯ ರವಿಶಂಕರ್ ಶೆಟ್ಟಿ ಬಡಾಜೆ ತೆಂಗಿನಕಾಯಿ ಒಡೆದು ಶೋಭಾಯಾತ್ರೆಗೆ ಚಾಲನೆ ನೀಡಿದರು.

ಬ್ರಹ್ಮಕಲಶ ಸಮಿತಿ ಅಧ್ಯಕ್ಷ ರಾಕೇಶ್ ಮಲ್ಲಿ, ಕಾರ್ಯಾಧ್ಯಕ್ಷ ಉಮಾಶಂಕರ್, ಬೂಡಾ ಅಧ್ಯಕ್ಷ ಬೇಬಿ ಕುಂದರ್, ಪ್ರಮುಖರಾದ ಸತೀಶ್ ಭಂಡಾರಿ ಕೊಳತ್ತಬೆಟ್ಟು, ಹರಿಕೃಷ್ಣ ಬಂಟ್ವಾಳ, ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಸುರೇಶ್ ಕುಲಾಲ್ ನಾವೂರ, ಮುರಳೀಧರ ಭಟ್ ನಾವೂರು, ಸದಾನಂದಗೌಡ ನಾವೂರು, ಲೋಕನಾಥ ಶೆಟ್ಟಿ, ರಾಮದಾಸ್ ಬಂಟ್ವಾಳ, ಉದಯಕುಮಾರ್ ರಾವ್ ಬಂಟ್ವಾಳ, ಪುರಸಭಾ ಸದಸ್ಯ ಎ.ಗೋವಿಂದ ಪ್ರಭು, ನರಸಿಂಹ ಮಾಣಿ, ಪ್ರಶಾಂತ್ ಕೆಂಪುಗುಡ್ಡೆ ಮೊದಲಾದವರಿದ್ದರು.

ಶ್ರೀರಕ್ತೇಶ್ವರಿ ಸನ್ನಿಧಿಯಲ್ಲಿ ಸ್ವಾಗತ : ಕೈಕಂಬದಿಂದ ಸಾಗಿ ಬಂದ ಬ್ರಹ್ಮರಥವನ್ನು ಬಿ.ಸಿ.ರೋಡ್ ಶ್ರೀರಕ್ತೇಶ್ವರೀ ದೇವಳದ ಮುಂಭಾಗ ಆಡಳಿತ ಸಮಿತಿಯಿಂದ ಸ್ವಾಗತಿಸಲಾಯಿತು. ಸಮಿತಿ ಅಧ್ಯಕ್ಷ ಬಿ.ವಿಶ್ವನಾಥ್ ಪುಷ್ಪಾರ್ಚನೆಗೈದರು. ಪ್ರಮುಖರಾದ ಬಿ.ಮೋಹನ್, ರಾಜೇಶ್ ಎಲ್.ನಾಯಕ್, ಸಂಜೀವ ಪೂಜಾರಿ, ಐತಪ್ಪ ಪೂಜಾರಿ, ನಾರಾಯಣ ಹೆಗ್ಡೆ, ಅಶ್ವನಿಕುಮಾರ್ ರೈ, ದೇವಪ್ಪ ಕುಲಾಲ್, ಸತೀಶ್ ಕುಮಾರ್ ಮೊದಲಾದವರಿದ್ದರು.

ಮಣಿಹಳ್ಳ ಜಂಕ್ಷನ್‌ನಲ್ಲಿ ರಥವನ್ನು ಸ್ವಾಗತಿಸಲಾಯಿತು. ಪೂರ್ಣಕುಂಭ ಸ್ವಾಗತದೊಂದಿಗೆ ಭಜನೆ, ಚೆಂಡೆ, ವಾದ್ಯಗೋಷ್ಠಿಯಲ್ಲಿ ರಥವನ್ನು ದೇವಸ್ಥಾನಕ್ಕೆ ವೈಭವಪೂರ್ಣವಾಗಿ ತರಲಾಯಿತು. ನೂರಾರು ಸಂಖ್ಯೆಯಲ್ಲಿ ಭಕ್ತರು ರಥದ ಜತೆಯಲ್ಲಿ ಹೆಜ್ಜೆ ಹಾಕಿದರು. ಮೂಡುಬಿದಿರೆಯ ಸಂಪಿಗೆಯಲ್ಲಿ ಹರೀಶ್ ಆಚಾರ್ಯ ನೇತೃತ್ವದಲ್ಲಿ ನೂತನ ರಥ ನಿರ್ಮಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net