ವಿದ್ಯಾರ್ಥಿಗಳಿಗೆ ದೈಹಿಕ ಆರೋಗ್ಯದೊಂದಿಗೆ ಬುದ್ಧಿಶಕ್ತಿ

meal
ಹಿರಿಯಡಕ ಕರ್ನಾಟಕ ಪಬ್ಲಿಕ್ ಸ್ಕೂಲ್ ಪದವಿಪೂರ್ವ ವಿಭಾಗದ ವಿದ್ಯಾರ್ಥಿಗಳಿಗೆ ಶ್ರೀ ಶೃಂಗೇರಿ ಶಾರದಾಂಬಾ ದೇವಸ್ಥಾನದಿಂದ ನೀಡುವ ಅನ್ನಪ್ರಸಾದ ಭೋಜನ ವ್ಯವಸ್ಥೆಯನ್ನು ಶೃಂಗೇರಿ ಮಠದ ಉಡುಪಿ ಪ್ರಾಂತ್ಯಾಧಿಕಾರಿ ಡಾ.ವಾಗೀಶ ಶಾಸ್ತ್ರಿ ಶುಭಾರಂಭ ಮಾಡಿದರು
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಶೃಂಗೇರಿ ಶಾರದಾಂಬಾ ದೇವಸ್ಥಾನ ಹಾಗೂ ಶ್ರೀ ಜಗದ್ಗುರುಗಳ ಆಶಿರ್ವಾದದಿಂದ ಹಿರಿಯಡಕ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಅನ್ನಪ್ರಸಾದ ಭೋಜನ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನದ ವೇಳೆ ಪಿಯುಸಿ ವಿದ್ಯಾರ್ಥಿಗಳು ಪ್ರಸಾದ ಭೋಜನ ಮಾಡುವುದರಿಂದ ವಿದ್ಯಾರ್ಥಿಗಳ ದೈಹಿಕ ಆರೋಗ್ಯದ ಜತೆ ಹೆಚ್ಚು ಬುದ್ಧಿಶಕ್ತಿಯನ್ನು ಶಾರದಾ ಮಾತೆ ಕರುಣಿಸುವಂತಾಗಲಿ ಎಂದು ಶೃಂಗೇರಿ ಮಠದ ಉಡುಪಿ ಪ್ರಾಂತ್ಯಾಧಿಕಾರಿ ಡಾ.ವಾಗೀಶ ಶಾಸ್ತ್ರಿ ಹೇಳಿದರು.

ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕ ಪದವಿಪೂರ್ವ ವಿಭಾಗದ ವಿದ್ಯಾರ್ಥಿಗಳಿಗೆ ಶ್ರೀ ಶೃಂಗೇರಿ ಶಾರದಾಂಬಾ ದೇವಸ್ಥಾನದಿಂದ ನೀಡುವ ಉಚಿತ ಅನ್ನಪ್ರಸಾದ ಭೋಜನ ಶುಭಾರಂಭಗೊಳಿಸಿ ಮಾತನಾಡಿರು.

ದಾನಿಗಳಾದ ಬಿ.ರಮಾನಂದ ರಾವ್, ಡಾ.ಎನ್.ಎಸ್.ಶೆಟ್ಟಿ, ದೀಪಾ ಶೆಟ್ಟಿ, ಸುಂದರ ಕಾಂಚನ್, ಮುರಳೀಧರ ಹಾಲಂಬಿ, ಉಡುಪಿ ಗ್ರೂಪ್‌ಆಫ್ ಇನ್‌ಸ್ಟಿಟ್ಯೂಷನ್ ಮತ್ತು ಸಾಫಲ್ಯ ಟ್ರಸ್ಟ್ ಉಡುಪಿ ಅವರನ್ನು ಅಭಿನಂದಿಸಲಾಯಿತು. ಪ್ರಾಂಶುಪಾಲ ಮಂಜುನಾಥ ಭಟ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಾರುತಿ, ಉದ್ಯಮಿ ಮಲ್ಯ ಹಿರಿಯಡಕ, ಅನ್ನಪ್ರಸಾದ ಭೋಜನ ಸಮಿತಿ ಅಧ್ಯಕ್ಷ ಅಶೋಕ್ ಜೋಗಿ, ಕಾರ್ಯದರ್ಶಿ ಗಣೇಶ್ ಪ್ರಭು, ಖಜಾಂಚಿ ಮಲ್ಲಿಕಾ, ಸುರೇಖಾ, ಶ್ರೀನಿವಾಸ, ಹಳೇ ವಿದ್ಯಾರ್ಥಿ ಸಂಘದ ಖಜಾಂಚಿ ದಿವಾಕರ ಭಂಡಾರಿ, ಸದಸ್ಯರಾದ ದೇವರಾಜ್ ಶಾಸ್ತ್ರಿ, ಸುಬ್ರಹ್ಮಣ್ಯ ರಾವ್, ಶೇಖರ್ ದೇವಾಡಿಗ, ನಿತ್ಯಾನಂದ ನಾಯಕ, ವಿಜಯ್ ಶೆಟ್ಟಿ, ನಿಶಿತಾ ಶೆಟ್ಟಿ, ಜ್ಯೋತಿ, ಉಪನ್ಯಾಸಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net