

ವಿಜಯಪುರ: ಸಿಇಟಿ ಪರೀಕ್ಷೆ ವೇಳೆ ಜನಿವಾರ ಕತ್ತರಿಸಿ ಅವಮಾನಿಸಿದ ಕ್ರಮ ಖಂಡಿಸಿ ಸಮಸ್ತ ಬ್ರಾಹ್ಮಣ ಸಮಾಜ ಹಾಗೂ ದಲಿತ, ಹಾಲುಮತ, ಕ್ಷತ್ರೀಯ, ವಿಶ್ವಕರ್ಮ, ರಜಪೂತ, ಮರಾಠ ಸಮಾಜದ ಹಲವು ಸಂಘಟನೆಗಳ ಪದಾಧಿಕಾರಿಗಳು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಪ್ರಮುಖ ಮಾರ್ಗಗಳಲ್ಲಿ ಪ್ರತಿಭಟನಾ ಮೆರವಣಿ ನಡೆಸಿದ ಪದಾಧಿಕಾರಿಗಳು ಹಾಗೂ ಸಮುದಾಯದ ಮುಖಂಡರುಗಳು ಜಿಲ್ಲಾಡಳಿತ ಕಚೇರಿ ತಲುಪಿ ಸಮಾವೇಶಗೊಂಡರು. ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ಬಳಿಕ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರಗೆ ಮನವಿ ಸಲ್ಲಿಸಿದರು.
ಭಾವಸಾರ ಕ್ಷೇತ್ರಿಯ ಸಮಾಜದ ಅಧ್ಯಕ್ಷ ರಾಜೇಶ ದೇವಗಿರಿ ಮಾತನಾಡಿ, ಏ.16ರಂದು ನಡೆದ ಸಿಇಟಿ ಪರೀಕ್ಷೆ ವೇಳೆ ಶಿವಮೊಗ್ಗ ಮತ್ತು ಬೀದರ್‌ನಲ್ಲಿ ವಿಪ್ರ ಸಮಾಜದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಅವರು ಧರಿಸಿದ ಜನಿವಾರವನ್ನು ಕತ್ತರಿಸಿ ಪರೀಕ್ಷೆಗೆ ಹಾಜರಾಗುವಂತೆ ಮಾಡಿದ್ದಾರೆ. ಕೆಲವು ವಿದ್ಯಾರ್ಥಿಗಳು ಪರೀಕ್ಷೆಯನ್ನೇ ನಿರಾಕರಿಸುವಂತೆ ಮಾಡಲಾಗಿದೆ. ಇದರಿಂದ ಜನಿವಾರ ಧರಿಸುವ ಅನೇಕ ಸಮುದಾಯಗಳ ಮನಸ್ಸಿಗೆ ಘಾಸಿಯಾಗಿದೆ. ನಮ್ಮ ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತ ಕೆಲಸವನ್ನು ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಮಾಡಿದ್ದು ಹೇಯಕೃತ್ಯ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈವರೆಗೂ ಈ ವಿಷಯಕ್ಕೆ ಸಂಬಂಧಪಟ್ಟಂತೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನು ಗಮನಿಸಿದರೆ ಅವರ ಬೆಂಬಲ ತಪ್ಪಿಸ್ಥರ ಪರ ಇದ್ದಂತಿದೆ. ಸರ್ಕಾರ ಈ ಸಮಸ್ಯೆಯನ್ನು ಶೀಘ್ರ ಪರಿಹರಿಸದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ದಲಿತ ಸಮಾಜದ ಯುವಮುಖಂಡ ಪುನಿತ ಕಾಂಬಳೆ ಮಾತನಾಡಿ, ನಾವು ದಲಿತ ಸಮಾಜದವರು ಸನಾತನಿಗಳಿಗೆ ಎಲ್ಲಿಯೇ ಅನ್ಯಾಯವಾದರೂ ನಾವು ಅವರ ಬೆಂಬಲಕ್ಕೆ ನಿಲ್ಲುತ್ತವೆ ಎಂದರು.
ಶ್ರೀ ರಾಮನವಮಿ ಉತ್ಸವ ಸಮಿತಿಯ ಅಧ್ಯಕ್ಷ ಉಮೇಶ ವಂದಾಲ ಮಾತನಾಡಿ, ಬ್ರಾಹ್ಮಣ ಸಮಾಜ ಯಾವತ್ತೂ ಸಹಿಷ್ಣರು. ಅವರ ಭಾವನೆಗೆ ಧಕ್ಕೆ ಮಾಡಿರುವುದು ಖಂಡನೀಯ ಎಂದರು.
ಮುಖಂಡರಾದ ನೀಲಕಂಠ ಕಂದಗಲ್ಲ, ವಿಜಯ ಚವಾಣ್, ರಾಹುಲ್ ಜಾಧವ, ಶ್ರೀಕಾಂತ ಕುಂದನಗಾರ, ಸೋಮನಾಥ ಕಳ್ಳಿಮನಿ, ಅಡಿವೆಪ್ಪ ಸಾಲಗಲ್ಲ, ಕೃಷ್ಣಭಟ್ ಗಲಗಲಿ, ಶ್ರೀಹರಿ ಗೊಳಸಂಗಿ, ನಾಗರಾಜ ಲಂಬು, ಲಕ್ಷ್ಮಿಕಾಂತ ಕುಲಕರ್ಣಿ, ವೆಂಕಟೇಶ ಜೊಶಿ, ದತ್ತಾ ಕುಲಕರ್ಣಿ, ಗಿರೀಶ ಕುಲಕರ್ಣಿ, ವಕೀಲರಾದ ಎಸ್.ಎಂ. ಸೋಲ್ಲಾಪಟ್ಟಿ, ಸಂಜೀವ ಜಹಾಗೀರದಾರ, ಎಸ್.ವಿ. ಜಹಾಗೀರದಾರ, ಆರ್.ಎಂ. ಕುಲಕರ್ಣಿ, ಬಿಂದುಮಾಧವ ಕಾಸನೀಸ, ವಿದ್ಯಾಧರ ಜೋಶಿ, ಪಾಪುಸಿಂಗ್ ರಜಪೂತ, ಉಮೇಶ ವಂದಾಲ, ಮುಕುಂದ ಕುಲಕರ್ಣಿ, ಸುನೀಲ ಬೈರೋಡಗಿ, ಭೀಮರಾಯ ಜಿಗಜಿಣಗಿ, ರೂಪಸಿಂಗ ಓಲೇಕಾರ, ಪ್ರದೀಪ ಸೋನಾರ, ಪ್ರಭಾಕರ ಭೋಸಲೆ, ಎನ್.ವಿ. ಕುಲಕರ್ಣಿ, ಗೋವಿಂದ ಜೋಶಿ, ವಿಜಯ ಜೋಶಿ, ದತ್ತಾತ್ರೇಯ ಜೋಶಿ, ರಮೇಶ ಕುಲಕರ್ಣಿ, ಸುಧೀರ ಕುಲಕರ್ಣಿ, ಮಹೇಶ ದೇಶಪಾಂಡೆ, ಶ್ರೀನಿವಾಸ ಬೆಟಗೇರಿ, ಕೃಷ್ಣಾ ಗುನ್ನಾಳಕರ, ಭಾಗ್ಯಶ್ರೀ ಕಟ್ಟಿ, ಕೃಷ್ಣಾಜಿ ಕುಲಕರ್ಣಿ, ಗೋವಿಂದ ಜೋಶಿ, ಅರವಿಂದ ಜೋಶಿ, ಜ್ಞಾನೇಶ್ವರ ಕುಲಕರ್ಣಿ, ಮದನ ಭಾಗವತ, ಮನೋಜ ಶಹಾಪೂರ, ಶಿವಾನಂದ ಭುಯ್ಯರ, ಮೋಹನ ಕುಲಕರ್ಣಿ, ನಂದಕಿಶೋರ ಕುಲಕರ್ಣಿ, ಶರಣು ಸಬರದ, ವಿಕಾಸ ಪದಕಿ, ಆನಂದ ಕುಲಕರ್ಣಿ, ಪ್ರಸನ್ನಾಚಾರ ಕಟ್ಟಿ, ಕಶಪ ಆಚಾರ ಗೋರನಾಳ, ಉಪೇಂದ್ರ ದೇಸಾಯಿ, ಚಿದಂಬರ ಪಾಟೀಲ, ಪವಮಾನ ಆಚಾರ ಪುರೋಹಿತ, ನರಹರಿ ಆಚಾರ ಮುತ್ತಗಿ, ಶ್ರೀಶಾಚಾರ್ಯ ಸುಳಿಭಾವಿ, ಭರತ ಕುಲಕರ್ಣಿ, ಚೈತ್ರಾ ಗೋಠೆಕರ, ಕೀರ್ತಿ ಕುಲಕರ್ಣಿ, ಸುಜಾತ ಕುಲಕರ್ಣಿ, ರಾಧ ಕುಲಕರ್ಣಿ, ರಾಜು ಹಜೇರಿ, ಪ್ರಭಾಕರ ಭೋಸಲೆ, ಸಂದೀಪ ಅರ್ಜುಣಗಿ, ಪವನ ಕುಲಕರ್ಣಿ, ಅಜೀತ ಕುಲಕರ್ಣಿ, ಭಾಗ್ಯಶ್ರೀ ಕಟ್ಟಿ, ಆರ್.ಬಿ. ಕುಲಕರ್ಣಿ, ಕಿರಣ ಕುಲಕರ್ಣಿ ಮತ್ತಿತರರಿದ್ದರು.