ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಯಿಸಿದ್ದು ಸಂವಿಧಾನ ವಿರೋಧಿ ಕೃತ್ಯ; ವಿಪ್ರ ಸಮಾಜದ ಮುಖಂಡ ಗೋಪಾಲ ನಾಯಕ

GOPAL NAIK
ಗೋಪಾಲ ನಾಯಕ, ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ವಿಚಾರಣಾಕರ್ತ
Published on

ವಿಜಯಪುರ: ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ತೆಗೆಯಿಸಿದ್ದು ಸಂವಿಧಾನ ವಿರೋಧಿ ಕೃತ್ಯ. ತಕ್ಷಣ ಅಧಿಕಾರಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ವಿಪ್ರ ಸಮಾಜದ ಮುಖಂಡ, ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ವಿಚಾರಣಾಕರ್ತ ಗೋಪಾಲ ನಾಯಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಯಾವ ಕಾನೂನಿನ್ವಯ ಅವರು ಜನಿವಾರ ತೆಗೆಯಿಸಿದರು ಎಂಬುದನ್ನು ಸ್ಪಷ್ಠ ಪಡಿಸಬೇಕು. ಮತ್ತು ಅವರನ್ನು ಅಮಾನತುಗೊಳಿಸಲು ಮನವಿ ಮಾಡಿದ್ದಾರೆ.

ಬ್ರಾಹ್ಮಣರಿಗೆ ಜನಿವಾರ ಪವಿತ್ರ. ನಿತ್ಯ ಪೂಜೆ ಪುನಸ್ಕಾರ ನಡೆಸುವ ಅರ್ಹತೆ ಹೊಂದಲು ಉಪನಯನ ಮಾಡಿ ಜನಿವಾರ ಧರಿಸಲಾಗುವುದು. ಧರ್ಮದ ಮೇಲೆ ಆಕ್ರಮಣ ಮಾಡಲು ಇವರಿಗೆ ಯಾರು ಅಧಿಕಾರ ಕೊಟ್ಟರು? ಅವರಿಗೆ ಶಿಕ್ಷೆ ಆಗುವವರೆಗೆ ಪತ್ರ ಚಳುವಳಿ ನಡೆಯಲಿದೆ ಎಂದು ಗೋಪಾಲ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net