ವಿಜೃಂಭಣೆಯ ಶ್ರೀ ವಾಣಿಯಮ್ಮನವರ ಬ್ರಹ್ಮರಥೋತ್ಸವ

ವಿಜೃಂಭಣೆಯ ಶ್ರೀ ವಾಣಿಯಮ್ಮನವರ ಬ್ರಹ್ಮರಥೋತ್ಸವ
Published on

ಹನಗೋಡು: ಹನಗೋಡು ಹೋಬಳಿಯ ಚಿಲ್ಕುಂದದಲ್ಲಿ ಶ್ರೀ ವಾಣಿಯಮ್ಮನವರ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಬ್ರಹ್ಮರಥೋತ್ಸವ ಹಿನ್ನೆಲೆಯಲ್ಲಿ ಶನಿವಾರ, ಭಾನುವಾರ ಪೂಜಾ ವಿಧಿ ವಿಧಾನಗಳು ಜರುಗಿದವು. ರಾತ್ರಿ ಮಳವಳ್ಳಿ ಮಹದೇವಸ್ವಾಮಿ ತಂಡದಿಂದ ಭಕ್ತಿ ಗೀತಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ರಥ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು. ನೆರೆದಿದ್ದವರು ರಥಕ್ಕೆ ಹಣ್ಣು-ದವನ ಎಸೆದು ಭಕ್ತಿ ಮೆರೆದರು. ನೆರೆದಿದ್ದವರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಸಿಡಿಮದ್ದು ಪ್ರದರ್ಶನ, ರಸಮಂಜರಿ ಸೇರಿದಂತೆ ವಿವಿಧ ಸಾಂಸ್ಕೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಸಕ ಜಿ.ಡಿ.ಹರೀಶ್‌ಗೌಡ ಭಾನುವಾರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಹನಗೋಡು ನಾಡಕಚೇರಿ ಉಪ ತಹಸೀಲ್ದಾರ್ ಚೆಲುವರಾಜು ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ನಡೆಯಿತು. ಜಿ.ಪಂ.ಮಾಜಿ ಸದಸ್ಯ ಸಿ.ಟಿ.ರಾಜಣ್ಣ, ಗ್ರಾ.ಪಂ.ಅಧ್ಯಕ್ಷ ಸತೀಶ್, ಗ್ರಾಮದ ಮುಖಂಡ ವೆಂಕಟೇಶ್ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net