ಬ್ರಹ್ಮರಕೂಟ್ಲು ಕಿರುಸೇತುವೆ ರಂಧ್ರಕ್ಕೆ ಮುಕ್ತಿ

New Project (4)
Published on

ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್‌ಗೇಟ್ ಮುಂಭಾಗದಲ್ಲಿರುವ ಕಿರು ಸೇತುವೆ ಬಳಿ ನಿರ್ಮಾಣವಾಗಿದ್ದ ದೊಡ್ಡ ರಂಧ್ರಕ್ಕೆ ಮುಕ್ತಿ ಸಿಕ್ಕಿದೆ. ಮಳೆಯಿಂದಾಗಿ ಮಣ್ಣು ಕುಸಿದು ರಾಷ್ಟ್ರೀಯ ಹೆದ್ದಾರಿ ಬಳಿ ಅಪಾಯಕಾರಿ ಹೊಂಡ ನಿರ್ಮಾಣಗೊಂಡಿತ್ತು. ಈ ಬಗ್ಗೆ ವಿಜಯವಾಣಿ ಮಂಗಳವಾರದ ಸಂಚಿಕೆಯಲ್ಲಿ ಬ್ರಹ್ಮರಕೂಟ್ಲು ಬಳಿ ಬಾಯ್ದೆರೆದ ಮೃತ್ಯುಕೂಪ ಎನ್ನುವ ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿತ್ತು. ಇದರಿಂದ ಎಚ್ಚೆತ್ತುಕೊಂಡ ಸಂಬಂಧಪಟ್ಟ ಇಲಾಖೆ ಹೊಂಡವನ್ನು ಸಂಪೂರ್ಣ ಮುಚ್ಚಿದೆ. ಇದರ ಮುಂಭಾಗದಲ್ಲಿ ರಸ್ತೆಗೆ ವಾಲಿಕೊಂಡ ಮರವನ್ನು ತೆರವುಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net