ಅವಹೇಳನಕಾರಿ ಪಠ್ಯ ಕೈಬಿಡಲು ವಿಪ್ರರ ಆಗ್ರಹ

IMG-20230825-WA0004
Published on

ಜಿಲ್ಲಾಧಿಕಾರಿ ಕಚೇರಿ ಎದುರು ಬ್ರಾಹ್ಮಣ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಎಂಟನೇ ತರಗತಿ ಕನ್ನಡ ಪಠ್ಯಪುಸ್ತಕದಲ್ಲಿ ವಿಜಯಮಾಲಾ ರಂಗನಾಥ್ ಬರೆದಿರುವ ಬ್ಲಡ್‌ಗ್ರೂಪ್ ಪಾಠದಲ್ಲಿ ವಿಪ್ರ ಸಮುದಾಯಕ್ಕೆ ಅವಹೇಳನ ಮಾಡಲಾಗಿದೆ. ತಕ್ಷಣ ಇದನ್ನು ಪಠ್ಯದಿಂದ ಕೈಬಿಡುವಂತೆ ಆಗ್ರಹಿಸಿ ಬ್ರಾಹ್ಮಣ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಸಮಾಜದ ಪ್ರಮುಖರಾದ ವಿಜಯಕುಮಾರ ಕುಲಕರ್ಣಿ, ಸುಧಾಕರ್ ಉಡಬಾಳಕರ್, ದತ್ತಾತ್ರೇಯ ಭಟ್ ಪೂಜಾರಿ ಇತರರು ಮಾತನಾಡಿ, ಅವಹೇಳನಕಾರಿ ಪಠ್ಯ ಕೈಬಿಡದಿದ್ದರೆ ಸಮಾಜದ ಉಗ್ರ ಪ್ರತಿಭಟನೆ ನಡೆಸಲಿದೆ. ದೇಶ, ಸಮಾಜ, ಧರ್ಮ, ಸಂಸ್ಕೃತಿಗೆ ವಿಶಿಷ್ಟ ಕೊಡುಗೆ ನೀಡುತ್ತಿರುವ ವಿಪ್ರರಿಗೆ ಅವಹೇಳನ ಮಾಡುವುದು ಸಹಿಸಲ್ಲ ಎಂದು ಎಚ್ಚರಿಸಿದರು.
ವಿಪ್ರ ಸಮುದಾಯ ಸುಸಂಸ್ಕೃತ ಹಾಗೂ ಶಾಂತಿಪ್ರಿಯವಿದೆ. ಸಮಾಜವನ್ನು ಕೆರಳಿಸಬಾರದು. ರಾಜ್ಯವ್ಯಾಪಿ ಹೋರಾಟ ಪ್ರಾರಂಭವಾಗುವ ಮುನ್ನ ಪಠ್ಯ ಕೈಬಿಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಶಾಲೆಯಲ್ಲಿ ಇಂತಹ ಅವಹೇಳನಕಾರಿ ಪಾಠ ಓದುವುದರಿಂದ ಮಕ್ಕಳಿಗೆ ಸಮುದಾಯದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಲಿದೆ ಎಂದರು.
ಎಲ್ಲ ಜಾತಿ, ಧರ್ಮ ಒಂದುಗೂಡಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡಬೇಕು. ಆದರೆ ಪಠ್ಯಪುಸ್ತಕ ನೋಡಿದಾಗ ಒಂದಿಲ್ಲ ಒಂದು ಜಾತಿ, ಪಂಗಡಗಳಿಗೆ ನೋವುಂಟು ಮಾಡುವ ಪಠ್ಯ ಸೇರಿಸಿರುವುದು ಖೇದಕರ ಸಂಗತಿ. ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾತನಾಡುವುದು ಹಾಗೂ ಪಠ್ಯಪುಸ್ತಕದಲ್ಲಿ ಕೆಟ್ಟ ಅಂಶ ಸೇರಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಸಮಾಜ ಸಂಘಟಿತರಾಗಿ ಇದರ ವಿರುದ್ಧ ಧ್ವನಿ ಎತ್ತಲಿದೆ ಎಂದರು.
ನಗರದ ಸರ್ದಾರ್ ಪಟೇಲï ವೃತ್ತದಿಂದ ಜಿ¯್ಲÁಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.ಸಿಎಂ, ಶಿಕ್ಷಣ ಸಚಿವರಿಗೆ  ಜಿಲ್ಲಾಧಿಕಾರಿ ಮೂಲಕ ಬರೆದ ಮನವಿಪತ್ರ ರವಾನಿಸಲಾಯಿತು.
ಜಿ¯್ಲÁ ಬ್ರಾಹ್ಮಣ ಸಂಘದ ಅಧ್ಯP್ಷÀ ದತ್ತಾತ್ರೇಯ ಭಟ್ ಪೂಜಾರಿ ಗಾಣಗಾಪೂರ್, ಪ್ರಮುಖರಾದ ರವಿ ಲಾತೂರ್‌ಕರ್,  ರಾಘವೇಂದ್ರ ವಕೀಲ್, ಗುಂಡಾಚಾರ್ಯ ನರಿಬೋಳ, ಅವಿನಾಶ ಕುಲಕರ್ಣಿ ರೇವೂರ್, ವಿನುತ್ ಜೋಶಿ, ರವೀಂದ್ರ ಕುಲಕರ್ಣಿ, ಮಲ್ಹಾರರಾವ್ ಗಾರಂಪಳ್ಳಿ, ವೆಂಕಟೇಶ ಕುಲಕರ್ಣಿ, ಪವನ್ ಫಿರೋಜಾಬಾದ್, ಆರ್.ಆರ್.ಕುಲಕರ್ಣಿ, ಸುಂದರ ಕುಲಕರ್ಣಿ, ವೀರೇಶ ಕುಲಕರ್ಣಿ, ಶಶಾಂಕ್ ಪೂಜಾರಿ, ಶ್ರೀನಿವಾಸ ಜಾಹಾಗಿರ್‌ದಾರ್, ವೈಜನಾಥ ಕುಳಗೇರಿ, ನಾರಾಯಣರಾವ್ ಕುಲಕರ್ಣಿ, ಶ್ರೀನಿವಾಸ ನೆಲೋಗಿ, ಪ್ರಮೋದ ಕುಲಕರ್ಣಿ, ಮಂಜುನಾಥ ಕುಲಕರ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net