ಶ್ರೀ ರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅದ್ದೂರಿ ಬ್ರಹ್ಮರಥೋತ್ಸವ

Brahma rathostava
Published on

ಬೆಂಗಳೂರು: ಚಾಮರಾಜಪೇಟೆಯ ಶ್ರೀರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಬ್ರಹ್ಮರಥೋತ್ಸವ ಅದ್ದೂರಿಯಾಗಿ ಜರುಗಿತು.

ಬೆಳಗ್ಗೆ ದೇವಾಲಯದಲ್ಲಿ ಸ್ವಾಮಿಗೆ ಅಭಿಷೇಕ, ಅಲಂಕಾರ, ವಿಶೇಷ ಪೂಜೆ ಮಾಡಲಾಯಿತು. ಬಲಿಪ್ರಧಾನ, ಯಾತ್ರಾದಾನ ಹಾಗೂ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. ವೃಷಭ ಲಗ್ನದಲ್ಲಿ ಬ್ರಹ್ಮರಥೋತ್ಸವ ಆರಂಭಗೊಂಡು ಚಾಮರಾಜಪೇಟೆಯ ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾಮೇಳಗಳೊಂದಿಗೆ ಉತ್ಸವ ಸಾಗಿತು. ಈ ವೇಳೆ ನೂರಾರು ಭಕ್ತರು ಪಾಲ್ಗೊಂಡಿದ್ದರು. ದೇವಾಲಯ ಆವರಣದಲ್ಲಿ ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಬಲಿಹರಣ, ಡೋಲೋತ್ಸವ ನೆರವೇರಿತು. ಎನ್.ಆರ್. ಪಂಡಿತಾರಾಧ್ಯ ಹಾಗೂ ಎನ್.ಪಿ. ಕಾರ್ತಿಕ್ ಮತ್ತು ಮುಕುಂದರಾವ್ ಕುಟುಂಬಸ್ಥರು ಸೇವೆ ನಡೆಸಿಕೊಟ್ಟರು. ಮಂಗಳವಾರ ವಸಂತೋತ್ಸವ, ಅಶ್ವವಾಹನೋತ್ಸವ ಹಾಗೂ ಬುಧವಾರ ಶಯನೋತ್ಸವ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net