

ಪುತ್ತೂರು ಗ್ರಾಮಾಂತರ: ಕೆಯ್ಯೂರು ಗ್ರಾಮದ ಪೂಂಜಿರೋಟು ಅಂಕತ್ತಡ್ಕ ನೇತ್ರಾವತಿ ಗರಡಿಯಲ್ಲಿ ಬ್ರಹ್ಮ ಬೈದೆರುಗಳ ನೇಮ ನಡೆಯಿತು.
ಬುಧವಾರ ಬೆಳಗ್ಗೆ ಗಣಪತಿ ಹೋಮ, ಶುದ್ಧಿಕಲಶ, ಸಂಜೆ ಭಂಡಾರ ತೆಗೆಯುವ, ಬೈದೆರುಗಳ ಗರಡಿ ಇಳಿಯುವ ಕಾರ್ಯಕ್ರಮ ನಡೆಯಿತು. ರಾತ್ರಿ ಪಂಜದ ಶ್ರೀ ಶಾರದಾಂಬ ಯಕ್ಷಗಾನ ಕಲಾ ಸೇವಾ ಟ್ರಸ್ಟ್-ಶ್ರೀ ಶಾರದಾಂಬ ಯಕ್ಷಗಾನ ಅಧ್ಯಯನ ಕೇಂದ್ರದವರಿಂದ ‘ಕದಂಬ ಕೌಶಿಕೆ’ ಯಕ್ಷಗಾನ ಪ್ರದರ್ಶನಗೊಂಡಿತು. ರಾತ್ರಿ ಸುರಿಯದ ಬಲಿ, ಕಿನ್ನಿದಾರು ನೇಮ ನಡೆಯಿತು. ಗುರುವಾರ ಬೈದೆರುಗಳ ಸುರಿಯ, ಭಕ್ತರಿಗೆ ಗಂಧ ಪ್ರಸಾದ ವಿತರಣೆ ನಡೆಯಿತು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.