ಸಂಪಿನಲ್ಲಿ ಕಾಲು ಜಾರಿ ಬಿದ್ದು ಬಾಲಕ ಸಾವು

boy death
Published on

ರಟ್ಟಿಹಳ್ಳಿ: ಬಹಿರ್ದಸೆಗೆ ತೆರಳಿದ್ದ ಬಾಲಕನೊಬ್ಬ ಕುಡಿಯುವ ನೀರಿನ ಸಂಪಿನಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಶನಿವಾರ ಸಂಜೆ ನಡೆದಿದೆ.

ಪ್ರಜ್ವಲ್ ಅಪ್ಪಣ್ಣ ಹೊನ್ನಗೇರ್ (10) ಮೃತಪಟ್ಟ ಬಾಲಕ.

ಕಡೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು. ಶಾಲೆ ಬಿಟ್ಟ ನಂತರ ಬಹಿರ್ದೆಸೆಗೆ ತೆರಳಿದ್ದ ಬಾಲಕ, ಶಾಲೆಯ ಹಿಂಭಾಗವಿರುವ ಕುಡಿಯುವ ನೀರಿನ ಫಿಲ್ಟರ್ ಬಳಿ ಇರುವ ನೀರಿನ ಸಂಪಿನಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮುಳುಗಿ ಮೃತಪಟ್ಟಿದ್ದಾನೆ ಎಂದು ಬಾಲಕನ ತಂದೆ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net