ಚಿರತೆ ದಾಳಿಯಿಂದ ಬಾಲಕನಿಗೆ ಗಾಯ

chirate
Published on

ರಾಮನಗರ: ತಾಲೂಕಿನ ಕೂಟಗಲ್ ಹೋಬಳಿಯ ಚಿಕ್ಕಗಂಗವಾಡಿ ಗ್ರಾಮದಲ್ಲಿ ಸೋಮವಾರ ರಾತ್ರಿ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದೆ. ಸಮರ್ಥ್ (10) ಗಾಯಗೊಂಡ ಬಾಲಕ.

ಚಿಕ್ಕಗಂಗವಾಡಿ ಗ್ರಾಮದ ಭದ್ರಯ್ಯ ಅವರ ಪುತ್ರ ಸಮರ್ಥ್ ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಮೂತ್ರ ವಿಸರ್ಜನೆಗೆ ಮನೆಯಿಂದ ಹೊರಬಂದಾಗ ಚಿರತೆ ದಾಳಿ ಮಾಡಿದೆ. ಈ ವೇಳೆ ಬಾಲಕ ಕಿರುಚಿಕೊಂಡಾಗ ಮನೆಯವರು ಹೊರಬಂದಾಗ ಚಿರತೆ ಓಡಿದೆ. ಬಾಲಕನನ್ನು ರಾಮನಗರದ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸೇಂಟ್ ಜಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ಪತ್ರೆಗೆ ಭೇಟಿ

ವಿಷಯ ತಿಳಿದು ಆಸ್ಪತ್ರೆಗೆ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ. ರಾಮಕೃಷ್ಣಪ್ಪ, ವಲಯ ಅರಣ್ಯಾಧಿಕಾರಿ ಮಹಮ್ಮದ್ ಮನ್ಸೂರ್, ಉಪ ವಲಯ ಅರಣ್ಯಾಧಿಕಾರಿ ವಾಸು ಭೇಟಿ ನೀಡಿ ಸಮರ್ಥ್ ಆರೋಗ್ಯ ವಿಚಾರಿಸಿ, ಮಗುವಿನ ತಂದೆ ತಾಯಿಗಳಿಗೆ ಧೈರ್ಯ ಹೇಳಿದರು. ಗಾಯಾಳುವಿನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಇಲಾಖೆ ಭರಿಸುತ್ತದೆ. ಭಯ ಪಡುವ ಅಗತ್ಯವಿಲ್ಲ ಎಂದು ರಾಮಕೃಷ್ಣಪ್ಪ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net