

ರಾಮನಗರ: ಅರ್ಕಾವತಿ ನದಿಯಲ್ಲಿ ಮುಳುಗಿ ಬಾಲಕ ಸಾವನ್ನಪ್ಪಿರುವ ಘಟನೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿ ಮಾಳ ಬಳಿ ಮಂಗಳವಾರ ನಡೆದಿದೆ.
ಬೆಂಗಳೂರಿನ ರಿಯಾಜ್ ಮತ್ತು ಸಮೀಮ್ ಬಾನು ಬಂಪತಿ ಪುತ್ರ ಮೊಹಮ್ಮದ್ ಸೈಫ್ (9) ಮೃತಪಟ್ಟ ಬಾಲಕ. ಹಳ್ಳಿ ಮಾಳದ ಬಳಿ ಅರ್ಕಾವತಿ ನದಿಯ ದಂಡೆಯ ಮೇಲಿರುವ ದರ್ಗಾಗೆ ಕುಟುಂಬ ಸಮೇತ ಬಂದಿದ್ದು, ಈ ವೇಳೆ ಮೊಹಮ್ಮದ್ ಸೈಪ್(9) ನೀರಿನಲ್ಲಿ ಆಟವಾಡುತ್ತಿದ್ದಾಗ ಮುಳುಗಿ ಮೃತಪಟ್ಟಿದ್ದಾನೆ.
ನಂತರ ಮೃತ ದೇಹ ಪತ್ತೆಯಾಗದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕೆಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರ ತೆಗೆದಿದ್ದಾರೆ.