ನೀರಿನಲ್ಲಿ ಮುಳುಗಿ ಬಾಲಕ ಸಾವು

Published on

ರಾಮನಗರ: ಹಾರೋಹಳ್ಳಿ ಠಾಣಾ ವ್ಯಾಪ್ತಿಯ ಮಲ್ಲಿಗೆ ಮೆಟ್ಟಿಲು ಗ್ರಾಮದಲ್ಲಿ ಈಜಲು ಹೋದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಅಸುನೀಗಿದ್ದಾನೆ. ತಾಲೂಕಿನ ಮಲ್ಲಿಗೆ ಮೆಟ್ಟಿಲು ಗ್ರಾಮದ ಸಿದ್ದರಾಜು ಎಂಬುವರ ಪುತ್ರ ಅರುಣ್ (13) ಮೃತ. ಸರ್ಕಾರಿ ಪ್ರೌಢಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದ ಈತ ಬುಧವಾರ ಮಧ್ಯಾಹ್ನ ಗ್ರಾಮದ ಹೊರ ವಲಯದಲ್ಲಿರುವ ಫಾರ್ಮ್ ಹೌಸ್‌ನ ಈಜುಕೊಳದಲ್ಲಿ ಈಜಲು ಹೋಗಿ ಮುಳುಗಿ ಮೃತಪಟ್ಟಿದ್ದಾನೆ.

ತಿಳಿದ ಹಾರೋಹಳ್ಳಿ ಪೊಲೀಸರು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಪಾಲಕರಿಗೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net