

ಮಹಾನಗರ ಪಾಲಿಕೆ ನಿರ್ಲಕ್ಷÈಕ್ಕೆ ಮಗು ಬಲಿ ಜನಾಕ್ರೋಶ | ಅವೈಜ್ಞಾನಿಕ ಚರಂಡಿ ವ್ಯವಸ್ಥೆಯೇ ಅವಘಡಕ್ಕೆ ಕಾರಣ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಆಟ ಆಡುತ್ತಿದ್ದ ವೇಳೆ ಮಗುವೊಂದು ಮನೆ ಮುಂದಿನ ಚರಂಡಿಯಲ್ಲಿ ಆಕಸ್ಮಿಕವಾಗಿ ಬಿದ್ದು ಎರಡು ವರ್ಷದ ಮಗು ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಗರದ ಹಾಗರಗಾ ರಸ್ತೆಯ ಮುಜಾಹಿರ ನಗರದಲ್ಲಿ ಸಂಭವಿಸಿದೆ. ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು. ನೋಡಿದವರು ಮಮ್ಮಲು ಮರುತ್ತಿದ್ದರು.
ಅಬ್ದುಲ್ ರೆಹಮಾನ (೨) ಮೃತಪಟ್ಟ ಬಾಲಕ. ಮಹಾನಗರ ಪಾಲಿಕೆಯ ನಿರ್ಲಕ್ಷÈಕ್ಕೆ ಮಗು ಬಲಿಯಾಗಿದೆ. ಆ ಪ್ರದೇಶವನ್ನು ಪ್ರತಿನಿಧಿಸುವ ಶಾಸಕರು, ಪಾಲಿಕೆ ಸದಸ್ಯರು ಸರಿಯಾದ ರೀತಿಯಲ್ಲಿ ಬಡಾವಣೆ ಜನರ ಬೇಡಿಕೆ ಸ್ಪಂದಿಸಿರಲಿಲ್ಲ. ಚರಂಡಿ ವ್ಯವಸ್ಥೆ ಕಲ್ಪಿಸದೆ ಇರುವುದರಿಂದಲೇ ಅಮಾಯಕ ಮಗುವೊಂದು ಬಲಿಯಾಗಿದೆ ಎಂದು ಜನರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.
ಸೋನಿಯಾ ಗಾಂಧಿ ಆಶ್ರಯ ಕಾಲನಿಯ ನಿವಾಸಿಯಾಗಿರುವ ಮಹ್ಮದ್ ಬುರಾನುದ್ದೀನ್ ಎಂಬುವರ ಪುತ್ರ. ಮುಜಾಹಿರ ನಗರದಲ್ಲಿ ಬಾಡಿಗೆ ಮನೆಯನ್ನು ಮಾಡಿಕೊಂಡು ಪೋಷಕರು ವಾಸವಾಗಿz್ದÁರೆ. ಗುರುವಾರ ಮಧ್ಯಾಹ್ನ ಮಗು ಆಟ ಆಡಿಕೊಂಡು ಮನೆಯ ಮುಂಭಾಗದಲ್ಲಿರುವ ಒಳಚರಂಡಿ ಕಡೆಗೆ ಹೋಗಿದೆ. ಆ ವೇಳೆಯಲ್ಲಿ ಮಗು ಗೊತ್ತಾದೆ ಚರಂಡಿಯಲ್ಲಿ ಬಿದ್ದಿದೆ.ಚರಂಡಿಯಲ್ಲಿ ಬಿದ್ದು ಮಗು ಉಸಿರುಗಟ್ಟಿ ಕೊನೆಯುಸಿರಳೆದಿದೆ ಎಂದು ಪೊಲೀಸರು ಮೂಲಗಳು ತಿಳಿಸಿವೆ.
ಬಡಾವಣೆಯಲ್ಲಿ ಸರಿಯಾದ ರೀತಿಯಲ್ಲಿ ಒಳಚರಿಂಡಿ ವ್ಯವಸ್ಥೆ ಇಲ್ಲದಿರುವುದು ಮತ್ತು ಚರಂಡಿಯ ಮೇಲೆ ಸರಿಯಾಗಿ ಮುಚ್ಚದೆ ಇರುವುದದೇ ಘಟನೆಗೆ ಕಾರಣ ಎನ್ನಲಾಗಿದೆ. ಅಲ್ಲಿನ ಸ್ಥಳೀಯ ನಿವಾಸಿಗಳು ಮಹಾನಗರ ಪಾಲಿಕೆ ಮತ್ತು ಜಿ¯್ಲÁಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಡಾವಣೆಯ ಜನರು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಮತ್ತು ಪಾಲಿಕೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.