ಗೌರಿ ಮಡಿಲಿಗೆ ಬಾಗಿನ

ಗೌರಿ ಮಡಿಲಿಗೆ ಬಾಗಿನ
Published on

ಹಾಸನ: ನಗರದ ಅರಳೇಪೇಟೆ ರಸ್ತೆ ಬಳಿ ಇರುವ ಶ್ರೀ ಬಸವೇಶ್ವರ ದೇವಾಲಯಕ್ಕೆ ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮಹಿಳೆಯರು ಮಂಗಳವಾರ ತೆರಳಿ ಗೌರಿ ಮಡಿಲಿಗೆ ಬಾಗಿನ ಅರ್ಪಿಸಿದರು.

ಬೆಳಗ್ಗೆಯಿಂದ ಮಹಿಳೆಯರು ಸಾಂಪ್ರದಾಯಿಕವಾಗಿ ದೇಗುಲಕ್ಕೆ ಬಂದು ಅಕ್ಕಿ, ಹಣ್ಣು, ಸಕ್ಕರೆಕಡ್ಡಿ, ಅರಿಶಿಣ-ಕುಂಕುಮ, ಸೀರೆ ಹಾಗೂ ಹಬ್ಬಕ್ಕೆ ಸಂಬಂಧಿಸಿದ ಪೌರಾಣಿಕ ಚಿಹ್ನೆಗಳನ್ನು ಅಲಂಕಾರಿಕವಾಗಿ ಇರಿಸಲಾಗಿತ್ತು. ಮಹಿಳೆಯರು ಕುಟುಂಬ ಸಮೇತರಾಗಿ ದೇವಾಲಯಕ್ಕೆ ಆಗಮಿಸಿ ಗೌರಿಯ ಪಾದಕ್ಕೆ ಬಾಗಿನ ಅರ್ಪಿಸಿ ಪ್ರಾರ್ಥಿಸಿದರು.

ಮಹಿಳೆಯರು ದೇವರನಾಮ ಸ್ಮರಣೆ, ಭಜನೆ ಮಾಡಿದರು. ದೇವಾಲಯ ಸಮಿತಿಯಿಂದ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಅರ್ಚಕ ಮಲ್ಲಯ್ಯ ಪೂಜಾ ಕೈಂಕರ್ಯ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net