ಗುಡ್ಡದಲ್ಲಿ ನವಜಾತ ಗಂಡು ಶಿಶು ಪತ್ತೆ, ಮಗು ರಕ್ಷಿಸಿ ಮಾನವೀಯತೆ ಮೆರೆದ ಸ್ಥಳೀಯರು!

cvbcvbcvb
Published on

ಹಾವೇರಿ: ನವಜಾತ ಗಂಡು ಶಿಶುವನ್ನ ಹೆತ್ತವರು ಗುಡ್ಡದಲ್ಲಿ ಬಿಟ್ಟು ಹೋಗಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಮಾರನಬೀಡ ಗ್ರಾಮದಲ್ಲಿ ನಡೆದಿದೆ.

ಗುಡ್ಡದ ಕುರುಚಲು ಪ್ರದೇಶದಲ್ಲಿ ಮಗು ಅಳುತ್ತಿರುವ ಶಬ್ಧ ಅಲ್ಲೇ ಬರುತ್ತಿದ್ದ ಸ್ಥಳೀಯ ವ್ಯಕ್ತಿಗೆ ಕೇಳಿಸಿದೆ. ಸಮೀಪ ಬಂದು ನೋಡಿದಾಗ ಯಾರೋ ಮಗುವನ್ನ ವಸ್ತ್ರದಲ್ಲಿ ಸುತ್ತಿ ನೀಲಗಿರಿ ಎಲೆಯಲ್ಲಿ ಮುಚ್ಚಿಟ್ಟಿದ್ದರು ಎಂದು ಸ್ಥಳೀಯ ವ್ಯಕ್ತಿ ಹೇಳಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಮಾರನಬೀಡ ಅಂಗನವಾಡಿ ಮಹಿಳಾ ಸಹಾಯಕಿಯರು ಮತ್ತು ಸ್ಥಳೀಯ ಆಸ್ಪತ್ರೆ ವೈದ್ಯರು ಮಗುವನ್ನ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಮಗು ಆರೋಗ್ಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಧ್ಯ ಮಗು ಯಾರದು, ಇಲ್ಲಿ ತಂದು ಬಿಟ್ಟವರು ಯಾರು ಎಂಬುದು ಪತ್ತೆಯಾಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net