ಕೊಳವೆಬಾವಿ ಮೋಟಾರ್ ಕಳವು

Published on

ಚಿಂತಾಮಣಿ: ತಾಲೂಕಿನ ಬಟ್ಲಹಳ್ಳಿ ಠಾಣಾ ವ್ಯಾಪ್ತಿಯ ಕಂಬಾಲಹಳ್ಳಿಯ ಕೆ.ಎಂ.ವೆಂಕಟರೆಡ್ಡಿಯವರ ಮನೆಯ ಮುಂದೆ ಇಟ್ಟಿದ್ದ ಕೊಳವೆಬಾವಿ ಮೋಟರ್‌ಗಳನ್ನು ಕಳವು ಮಾಡಿದ್ದು, ಬಟ್ಲಹಲ್ಳಿ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ. ತಿಂಗಳ ಹಿಂದೆ ಕೊಳವೆಬಾವಿಯ 2 ಮೋಟರ್‌ಗಳು ಕೆಟ್ಟುಹೋಗಿದ್ದರಿಂದ ಅವುಗಳನ್ನು ಮೇಲಕ್ಕೆತ್ತಿ ಮನೆ ಮುಂದೆ ಇಡಲಾಗಿತ್ತು. ಇವುಗಳನ್ನು ಕಳವು ಮಾಡಲಾಗಿದೆ ಎಂದು ವೆಂಕಟರೆಡ್ಡಿ ಎಂಬುವರು ಬಟ್ಲಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net