ಕುಮಾರಸ್ವಾಮಿ ಮೇಕೆದಾಟಿಗೆ ಅನುಮತಿ ಕೊಡಿಸಿಲ್ಲ ಏಕೆ? ; ಕಂದಾಯ ಸಚಿವ ಕೃಷ್ಣ ಭೈರೇಗೌಡ ಆರೋಪ

kk
Published on

 ರಾಮನಗರ : ಕೇಂದ್ರದ ಮಂತ್ರಿಯಾಗಿ ಕುಮಾರಸ್ವಾಮಿ ಅವರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕಿತ್ತುಹಾಕುವುದೇ ಗುರಿಯಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಆರೋಪಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಪರ ಚನ್ನಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಗುರುವಾರ ಪ್ರಚಾರ ನಡೆಸಿದ ಅವರು, ಕೆಲವರು ಕೆಲಸದ ಬಗ್ಗೆ ವಾತನಾಡಲು ತಯಾರಿಲ್ಲ. ಭಾವನಾತ್ಮಕವಾಗಿ ಜನರನ್ನು ಯಾವಾರಿಸುತ್ತಾರೆ. ಕುವಾರಸ್ವಾಮಿ ದಿನ ಬೆಳಗಾದರೆ ಸರ್ಕಾರವನ್ನು ಕಿತ್ತು ಹಾಕುತ್ತೇವೆ ಅಂತಾರೆ. ಇಂತಹವರು ಅಭಿವೃದ್ಧಿ ಮಾಡುತ್ತಾರಾ ಎಂದು ಸಚಿವರು ಪ್ರಶ್ನಿಸಿದರು. ಕಾಂಗ್ರೆಸ್ ಸರ್ಕಾರವನ್ನು ತೆಗೆದರೆ ಕುವಾರಸ್ವಾಮಿಗೆ ಅನುಕೂಲ ಆಗಬಹುದು. ಇದರಿಂದ ಜನರಿಗೆ ಏನೂ ಅನುಕೂಲ ಇಲ್ಲ ಎಂದರು.

ಬಿಜೆಪಿ ಕಾಲದಲ್ಲೇ ವಕ್ಫ್‌ಗೆ ಆಸ್ತಿ

ಬಿಜೆಪಿ ಇಂದು ವಕ್ಫ್ ವಿಚಾರವನ್ನು ವಿವಾದ ಮಾಡುತ್ತಿದೆ. ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುತ್ತಿದೆ. ಆದರೆ ಬಿಜೆಪಿ ಕಾಲದಲ್ಲೇ ನೂರಾರು ಆಸ್ತಿಗಳನ್ನು ವಕ್ಫ್‌ಗೆ ಬರೆದುಕೊಟ್ಟಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ನೋಟಿಸ್ ಇಲ್ಲದೆ ರೈತರ ಜಮೀನನ್ನು ವಕ್ಫ್‌ಗೆ ಬರೆದುಕೊಟ್ಟಿದ್ದಾರೆ. ಇವತ್ತು ರಾಜಕೀಯಕ್ಕೋಸ್ಕರ ನಮ್ಮ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ರಾಜಕೀಯ, ಚುನಾವಣೆಗೋಸ್ಕರ ಜನರ ಮನಸ್ಸನ್ನು, ಸವಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ಎಂದು ಟೀಕಿಸಿದರು.

ಈಗಾಗಲೇ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ವಾಡಿ ನಾವು ಸೂಚನೆ ಕೊಟ್ಟಿದ್ದೇವೆ. ಆರ್‌ಟಿಸಿಯಲ್ಲಿ ಬದಲಾವಣೆ ಆಗಿದ್ದರೆ ಕೂಡಲೇ ವಜಾ ಮಾಡುವಂತೆ ಹೇಳಿದ್ದೇವೆ. ಏನೇ ವಾಡಿದರೂ ನೋಟಿಸ್ ನೀಡಿ ವಾಡಬೇಕು ಎಂಬ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.

ಮೇಕೆದಾಟಿಗೆ ಅನುಮತಿ ಕೊಡಿಸಿ

ರಾಜ್ಯ ಸರ್ಕಾರವನ್ನು ಹಗರಣಗಳ ಸರ್ಕಾರ ಎಂದು ಮೈತ್ರಿ ನಾಯಕರು ಆರೋಪ ಮಾಡುತ್ತಿದ್ದಾರೆ. ಈಗ ಕೇಂದ್ರದಲ್ಲಿ ಕುಮಾರಸ್ವಾಮಿ ಮತ್ತು ಪ್ರಲ್ಹಾದ್ ಜೋಶಿ ಅವರು ಮಂತ್ರಿಯಾಗಿದ್ದಾರೆ. ಮೇಕೆದಾಟಿಗೆ ಏಕೆ ಇವರು ಅನುಮತಿ ಕೊಡಿಸಿಲ್ಲ? ಕುವಾರಸ್ವಾಮಿ ಅವರು ಒಂದೇ ದಿನದಲ್ಲಿ ಕೈ ಹಿಡಿದು ಸಹಿ ವಾಡಿಸುತ್ತೇನೆ ಎಂದು ಹೇಳಿದ್ದರು. ಸರ್ಕಾರ ಬಂದು 6 ತಿಂಗಳಾಗಿದೆ. ಮೇಕೆದಾಟಿಗೆ ಏಕೆ ಅನುಮತಿ ಕೊಡಿಸಿಲ್ಲ ಎಂದು ಕೃಷ್ಣ ಭೈರೇಗೌಡ ಪ್ರಶ್ನಿಸಿದರು.

ಮಹದಾಯಿ ಹೋರಾಟ 30 ವಷರ್ಗಳಿಂದ ನಡೆಯುತ್ತಿದೆ. ಎಷ್ಟೋ ಜನ ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಕಳಸಬಂಡೂರಿ ನಾಲೆಗೆ ಅನುಮತಿ ಕೊಡಿಸೋಕೆ ಆಗಲಿಲ್ಲ. ಗೋವಾ ರಾಜ್ಯಕ್ಕೆ ಅರ್ಧ ಗಂಟೆಯಲ್ಲೆ ಪವರ್ ಲೈನ್‌ಗೆ ಅನುಮತಿ ಕೊಡಿಸುತ್ತಾರೆ. ನಮ್ಮ ಕರ್ನಾಟಕದ ಕುಡಿಯುವ ನೀರಿನ ಪೈಪ್ ಹಾಕಲು ಅನುಮತಿ ದೊರೆತಿಲ್ಲ. ಕುವಾರಸ್ವಾಮಿ, ಜೋಶಿ ಏನು ವಾಡ್ತಾ ಇದ್ದಾರೆ? ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆಗೆ 5300 ಕೋಟಿ ರೂ. ಕೊಡಬೇಕು. 53 ಪೈಸೇನೂ ಕೇಂದ್ರ ಕೊಟ್ಟಿಲ್ಲ. ಕೇಂದ್ರ ಮಂತ್ರಿಯಾಗಿ ಏನು ವಾಡ್ತಾ ಇದಾರೆ? ನಾವು 100 ರೂ. ತೆರಿಗೆ ಕಟ್ಟಿದರೆ 15 ರೂ. ಸಿಕ್ತಾ ಇಲ್ಲ. ಕರ್ನಾಟಕಕ್ಕೆ ಅನ್ಯಾಯ ಆಗ್ತಾ ಇದೆ. ಇದಕ್ಕೆಲ್ಲ ಮೊದಲು ಉತ್ತರ ಕೊಡಲಿ. ನಮಗೆ ತೆರಿಗೆ ಪಾಲನ್ನು ಕೊಡಿಸಿ ಅಂದರೆ ಇವರಿಗೆ ಆಗಲ್ಲ. ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವುದೇ ಇವರ ಗುರಿ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net