ಪುಸ್ತಕಗಳ ಆಯ್ಕೆಗೆ ಲೇಖಕ ಪ್ರಕಾಶಕರ ಕೃತಿಗಳ ಆಹ್ವಾಸಿದ KKRDB

Books
Published on

ಯಾದಗಿರಿ : ಕಲ್ಯಾಣ ಕರ್ನಾಟಕ ಭಾಗದ ಲೇಖಕರಿಗೆ ಉತ್ತೇಜನ ನೀಡಲು ಹಾಗೂ ಈ ಭಾಗದ ಲೇಖಕರು ಬರೆದ ಪುಸ್ತಕಗಳನ್ನು ಪರಿಚಯಿಸುವ ಪ್ರಮುಖ ಉದ್ದೇಶದ ಹಿನ್ನಲೆಯಲ್ಲಿ ಹಾಗೂ ಕಲ್ಯಾಣ ಕರ್ನಾಟಕ ಭಾಗದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಸಾರ್ವಜನಿಕರಿಗೆ ಓದುವ ಉತ್ತೇಜನ ನೀಡಲು ಕೆ.ಕೆ.ಆರ್.ಡಿ.ಬಿ. ಕಲಬುರ್ಗಿ ಮ್ಯಾಕ್ರೋ ಯೋಜನೆಯಡಿ ಸ್ಥಳೀಯ ಲೇಖಕರಿಂದ 2018-19 ನೇ ಸಾಲಿನ ಜನೇವರಿ-2018 ರಿಂದ 2023-24 ನೇ ಸಾಲಿನ ಡಿಸೆಂಬರ-2023 ರವರೆಗೆ ಪ್ರಥಮವಾಗಿಮುದ್ರಣಗೊಂಡುಸಾಹಿತ್ಯ/ಲಲಿತಕಲೆ/ವಿಜ್ಞಾನ/ಮಾನವಿಕ/ವೈದ್ಯಕೀಯ/ತಾ0ತ್ರಿಕ/ಸ್ಪರ್ಧಾತ್ಮಕ/ಪರಾಮಾರ್ಶನ ಕೃತಿಗಳು ಹಾಗೂ ಮಕ್ಕಳ ಸಾಹಿತ್ಯ/ನವಸಾಕ್ಷರರ ಕೃತಿಗಳು ಇತ್ಯಾದಿ ವಿಷಯಗಳ ಕನ್ನಡ/ ಆಂಗ್ಲ/ಇತರೆ ಭಾರತೀಯ ಭಾಷೆಯ ಗ್ರಂಥಗಳ ಆಯ್ಕೆಗೆ ಲೇಖಕರು, ಲೇಖಕ ಪ್ರಕಾಶಕರು, ಪ್ರಕಟಣಾ ಸಂಸ್ಥೆಗಳು ವಿತರಕರಿಂದ ಪುಸ್ತಕಗಳನ್ನು ಆಹ್ವಾಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಕೇಂದ್ರ ಗ್ರಂಥಾಲಯ ಮುಖ್ಯ ಗ್ರಂಥಾಲಯಾಧಿಕಾರಿ ಹಾಗೂ ಸದಸ್ಯ ಕಾರ್ಯದರ್ಶಿ ಕೆಕೆಆರ್‌ಡಿಬಿ ಅನುಷ್ಠಾನ ಅಧಿಕಾರಿ ಜಯಪ್ರಕಾಶ ಅವರು ತಿಳಿಸಿದ್ದಾರೆ.

ಪುಸ್ತಕಗಳು ಈ ಕೆಳಕಂಡ ನಿಬಂಧನೆಗಳಿಗೊಳಪಟ್ಟು ಖರೀದಿಸಲಾಗುವುದು

ಪುಸ್ತಕ ಆಯ್ಕೆ ಷರತ್ತು ಹಾಗೂ ನಿಬಂಧನೆಗಳು : ಮಾನ್ಯ ಜಿಲ್ಲಾಧಿಕಾರಿಗಳು, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಯಾದಗಿರಿ ಅವರ ಅಧ್ಯಕ್ಷತೆಯಲ್ಲಿ ಪುಸ್ತಕ ಖರೀದಿಗಾಗಿ ರಚಿಸಲಾದ ಸಮಿತಿಯಲ್ಲಿ ಲೇಖಕರು ಸಲ್ಲಿಸಿದ ಪುಸ್ತಕಗಳ ಗುಣಮಟ್ಟ ಪರಿಶೀಲಿಸಿ ಖರೀದಿಗಾಗಿ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಪುಸ್ತಕಗಳ ಒಂದು ಶೀರ್ಷಿಕೆಯ 1300 ಪ್ರತಿಗಳಿಗೆ ಸೀಮಿತವಾಗಿರುತ್ತದೆ. ಒಬ್ಬ ಲೇಖಕರಿಂದ ಒಂದು ಪುಸ್ತಕ ಖರೀದಿಸುವುದು. ಗರಿಷ್ಠ ಗುರಿ ತಲುಪದಿದ್ದಲ್ಲಿ, ಇನ್ನೊಂದು ಪುಸ್ತಕ ಖರೀದಿಸಲು ಅವಕಾಶ ಇರುತ್ತದೆ. ಹೊಸ ಲೇಖಕರಿಗೆ ಮೊದಲು ಆದ್ಯತೆ ಹಾಗೂ ಈ ಹಿಂದೆ ಮಂಡಳಿಯಿAದ/ಗ್ರ0ಥಾಲಯ ಇಲಾಖೆಯಿಂದ ಪುಸ್ತಕಗಳನ್ನು ಖರೀದಿಸಲಾದ ಲೇಖಕರಿಗೆ ನಂತರ ಆದ್ಯತೆ ನೀಡಲಾಗುವುದು.

ಪುಸ್ತಕಗಳನ್ನು ಬರೆದ ಲೇಖಕರು ಕಡ್ಡಾಯವಾಗಿ ಯಾದಗಿರಿ ಜಿಲ್ಲೆಯವರೇ ಆಗಿರತಕ್ಕದ್ದು. ಹಾಗೂ ತಮ್ಮ ಧೃಡೀಕೃತ ವಿಳಾಸದ ಪ್ರತಿಯನ್ನು ಸಲ್ಲಿಸುವುದು. 2018-19ನೇ ಸಾಲಿನ ಜನೇವರಿ-2018 ರಿಂದ 2023-24ನೇ ಸಾಲಿನ ಡಿಸೆಂಬರ-2023ರ ವರೆಗೆ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾಗಿರಬೇಕು. ಮರು ಮುದ್ರಣವಾದಲ್ಲಿ ಹತ್ತು ವರ್ಷಗಳ ಅಂತರವಿರಬೇಕು. ಈ ಬಗ್ಗೆ ದೃಢೀಕರಣ ಪತ್ರವನ್ನು ನೀಡಬೇಕು. ಪುಸ್ತಕದ ಶೀರ್ಷಿಕೆ, ಗ್ರಂಥಕರ್ತರ ಹೆಸರು, ಪ್ರಕಾಶಕರ ಹೆಸರು, ಪುಟ ಸಂಖ್ಯೆ, ಪ್ರಕಟಣೆಯ ವರ್ಷ, ಆವೃತ್ತಿಯ ಎಲ್ಲಾ ವರ್ಷಗಳ ವಿವರ, ಮುಖ ಬೆಲೆಗಳನ್ನು ಸ್ಪಷ್ಠವಾಗಿ ನಮೂದಿಸಬೇಕು. ಇವುಗಳಲ್ಲಿ ತಾಂತ್ರಿಕ ಲೋಪದೋಷಗಳು ಏನಾದರೂ ಇದ್ದಲ್ಲಿ ತಿರಸ್ಕರಿಸುವ ಹಕ್ಕು ಆಯ್ಕೆ ಸಮಿತಿಗೆ ಇದೆ. ಪ್ರಸ್ತುತ ವರ್ಷದಲ್ಲಿಯೇ ಕೃತಿ ಮೊದಲ ಮುದ್ರಣವಾಗಿದೆ ಎಂಬ ಬಗ್ಗೆ ಮರು ಮುದ್ರಣಕ್ಕೆ ಹತ್ತು ವರ್ಷಗಳ ಅಂತರವಿದೆ ಎಂಬ ಬಗ್ಗೆ ಕಡ್ಡಾಯವಾಗಿ ಮುಚ್ಚಳಿಕೆ ಪತ್ರವನ್ನು ನೀಡತಕ್ಕದ್ದು. ಸುಳ್ಳು ಮಾಹಿತಿ ನೀಡಿದಲ್ಲಿ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು.

ಮೂವತ್ತೆರಡು (32) ಪುಟಕ್ಕಿಂತ ಕಡಿಮೆ ಪುಟಗಳಿರುವ ಪುಸ್ತಕಗಳನ್ನು ಆಯ್ಕೆಗೆ ಸ್ವೀಕರಿಸುವುದಿಲ್ಲ. (ಮಕ್ಕಳ ಪುಸ್ತಕ, ಎನ್.ಬಿ.ಟಿ. ಹಾಗೂ ನವಸಾಕ್ಷರತೆ ಸಾಹಿತ್ಯಕ್ಕೆ ಇದು ಅನ್ವಯಿಸುವುದಿಲ್ಲ) ಪುಸ್ತಕ ಖರೀದಿಗೆ ನಿಗದಿಯಾದ ಮೊತ್ತದಲ್ಲಿ ಶೇ.80 ರಷ್ಟು ಕನ್ನಡ ಪುಸ್ತಕಗಳು (ಎಲ್ಲಾ ವಿಷಯಗಳು ಸೇರಿ) ಶೇ.20 ರಷ್ಟು ಆಂಗ್ಲ ಭಾಷೆಯ ಪುಸ್ತಕಗಳು ಹಾಗೂ ಇತರೆ ಭಾರತೀಯ ಭಾಷೆಯ ಪುಸ್ತಕಗಳನ್ನು ಆಯ್ಕೆ ಮಾಡಲು ಅವಕಾಶವಿರುವುದರಿಂದ ನಿಯಾಮಾವಳಿಗಳಿಗೆ ಒಳಪಟ್ಟು ಪುಸ್ತಕಗಳನ್ನು ಆಯ್ಕೆಗೆ ಸಲ್ಲಿಸಬಹುದು. ಕರ್ನಾಟಕದಲ್ಲಿ ಪ್ರಕಟವಾದ ಆಂಗ್ಲ ಪುಸ್ತಕಗಳಿಗೆ ಆದ್ಯತೆ ಇರುತ್ತದೆ. ಲೇಖಕರೇ ಪ್ರಕಾಶಕರಾಗಿದ್ದಲ್ಲಿ ಲೇಖಕರೇ ಅರ್ಜಿ ಸಲ್ಲಿಸಬೇಕು. ಪುಸ್ತಕಗಳನ್ನು ಪ್ರಕಟಿಸುವ ಮೂಲ ಪ್ರಕಾಶಕರು ಅಥವಾ ಅವರ ಅನುಮತಿಯನ್ನು ಅಧಿಕೃತವಾಗಿ ಪಡೆದ ಪುಸ್ತಕ ವ್ಯಾಪಾರಿಗಳು ಮಾತ್ರ ಅರ್ಜಿ ಸಲ್ಲಿಸಬೇಕು. ನೊಂದಣಿ ಪತ್ರದಲ್ಲಿ ಅವರ ವಿಳಾಸವನ್ನು ದಾಖಲು ಮಾಡಿರಬೇಕು. ನ್ಯೂಸ್ ಪ್ರಿಂಟ್ ಅಥವಾ ಇತರೆ ಅಗ್ಗದ ಕಾಗದದಲ್ಲಿ ಮುದ್ರಿಸಿರುವ ಪುಸ್ತಕಗಳನ್ನು ಯಾವುದೇ ಕಾರಣಕ್ಕೂ ಅಯ್ಕೆಗೆ ಸ್ವೀಕರಿಸುವುದಿಲ್ಲ. ಆಯ್ಕೆಗೆ ಒಪ್ಪಿಸಿದ ಯಾವುದೇ ಭಾಷೆಯ ಗ್ರಂಥಗಳನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸುವುದಿಲ್ಲ. ಲೇಖಕರು, ಲೇಖಕ-ಪ್ರಕಾಶಕರು, ಪ್ರಕಾಶಕರು ಮತ್ತು ಪ್ರಕಟಣಾ ಸಂಸ್ಥೆಗಳು ತಾವು ಪ್ರಕಟಿಸಿದ ಪುಸ್ತಕಗಳನ್ನು ಬೆಂಗಳೂರಿನ ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ಗ್ರಂಥಸ್ವಾಮ್ಯ (ಕಾಪಿರೈಟ್) ಕಾಯ್ದೆಯಡಿಯಲ್ಲಿ ಅಯಾ ವರ್ಷದಲ್ಲಿ ಪ್ರತಿ ಗ್ರಂಥಗಳ ಮೂರು ಪ್ರತಿಗಳನ್ನು ಮುಫತ್ತಾಗಿ ಸಲ್ಲಿಸಿ ನೋಂದಣೆಯನ್ನು ಮಾಡಿಸಿರತಕ್ಕದ್ದು, ಹಾಗೂ ಅರ್ಜಿಯೊಂದಿಗೆ ಆಯ್ಕೆಗಾಗಿ ಸಲ್ಲಿಸುವ ಪುಸ್ತಕದ ಕೊನೆಯ ಪುಟದಲ್ಲಿ ನೋಂದಣಿ ಪತ್ರದ ನಕಲನ್ನು ಕಡ್ಡಾಯವಾಗಿ ಅಂಟಿಸಿರಬೇಕು. ಇಲ್ಲದೇ ಇದ್ದಲ್ಲಿ ಅಂತಹ ಗ್ರಂಥಗಳನ್ನು ತಿರಸ್ಕರಿಸುವ ಹಕ್ಕು ಆಯ್ಕೆ ಸಮಿತಿಯದಾಗಿರುತ್ತದೆ.

ನಿಗದಿತ ಅರ್ಜಿ ನಮೂನೆಯಲ್ಲ್ಲಿ (ಅರ್ಜಿ ನಮೂನೆಯು ಜಿಲ್ಲಾ ಕೇಂದ್ರ ಗ್ರಂಥಾಲಯ, ಯಾದಗಿರಿಯಲ್ಲಿ ದೊರೆಯುತ್ತವೆ). 1.ಅರ್ಜಿದಾರರ ಹೆಸರು ಮತ್ತು ವಿಳಾಸ. 2. ಪ್ರಕಾಶಕರು/ಸರಬರಾಜುದಾರರ ಹೆಸರು ಮತ್ತು ವಿಳಾಸ. 3.(ಎ) ಅರ್ಜಿದಾರರು ಪುಸ್ತಕದ ಲೇಖಕರೇ/ಪ್ರಕಾಶಕರೇ/ವಿತರಕರೇ ಬಿ). ಪುಸ್ತಕದ ಹಕ್ಕು 4.(ಎ) ಪುಸ್ತಕದ ಶಿರೋನಾಮೆ ಬಿ). ಲೇಖಕರ ಹೆಸರು ಸಿ). ಸಂಪುಟಗಳ ಸಂಖೈ. ಡಿ). ಪುಸ್ತಕದ ವಿಷಯ. 5. ಪ್ರಕಟಣಾ ವರ್ಷ. 6. ಅನುವಾದವಾಗಿದಲ್ಲಿ ಮೂಲ ಲೇಖಕರ ಹೆಸರು ಮತ್ತು ಭಾಷೆ. 7.(ಎ). ಪುಸ್ತಕದ ಅಳತೆ. ಬಿ). ಪುಟಗಳ ಸಂಖ್ಯೆ. ಸಿ). ಬೈಂಡಿAಗ್. ಡಿ). ಪುಸ್ತಕದ ಬೆಲೆ. ಇ). ಪುಸ್ತಕ ಮುದ್ರಿಸಲು ಬಳಸಿದ ಕಾಗದದ ಗುಣಮಟ್ಟ. 8. ಗ್ರಂಥವು ಮರು ಮುದ್ರಣಗೊಂಡಿದ್ದರೆ, ಮೊದಲ ಅವೃತ್ತಿ ವರ್ಷ. 9. ಗ್ರಂಥಸ್ವಾಮ್ಯ ನೊಂದಣಿ ಸಂಖ್ಯೆ ಮತ್ತು ವರ್ಷ. 10. ಲೇಖಕ, ಲೇಖಕ-ಪ್ರಕಾಶಕರು ಕಡ್ಡಾಯವಾಗಿ ಪ್ಯಾನ್ ಸಂಖ್ಯೆ ಹಾಗೂ ಪ್ರಕಾಶಕರು/ಮಾರಟಗಾರರು ಜಿ.ಎಸ್.ಟಿ. ನೊಂದಾಣಿ ಪ್ರಮಾಣ ಪತ್ರದ ಸಂಖ್ಯೆಯನ್ನು ನಮೂದಿಸುವುದು. ಮೇಲ್ಕಂಡ ಮಾಹಿತಿಗಳು ಸತ್ಯವಾಗಿರುತ್ತದೆ ಎಂದು ದೃಢೀಕರಿಸುವುದು ಎಂದು ಅರ್ಜಿಯ ಘೋಷಣಾ ಪ್ರಮಾಣ ಪತ್ರದಲ್ಲಿ ಸಹಿ ಮಾಡುವುದು. ಆಯ್ಕೆಯಾದ ಪುಸ್ತಕಗಳಿಗೆ ಸರಕಾರ ನಿಗದಿಪಡಿಸಿದ ಬೆಲೆಯ ಆಧಾರದ ಮೇಲೆ ಬೆಲೆಯನ್ನು ನಿಗದಿಪಡಿಸಲಾಗುವುದು. 2018-19ನೇ ಸಾಲಿನ ಜನೇವರಿ-2018 ರಿಂದ 2023-24ನೇ ಸಾಲಿನ ಡಿಸೆಂಬರ-2023ರ ವರೆಗೆ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾದ ಪುಸ್ತಕಗಳನ್ನು ಗ್ರಂಥಸ್ವಾಮ್ಯ ವಿಭಾಗ, ರಾಜ್ಯ ಕೇಂದ್ರ ಗ್ರಂಥಾಲಯ, ಕಬ್ಬನ್ ಉದ್ಯಾನವನ, ಬೆಂಗಳೂರು ಇಲ್ಲಿ ಕಾಪಿರೈಟ್ ಮಾಡಿಸಿರುವ ಪುಸ್ತಕಗಳನ್ನು ಆಯ್ಕೆಗಾಗಿ ಅರ್ಜಿಯೊಂದಿಗೆ ಪುಸ್ತಕದ ಒಂದು ಪ್ರತಿಯನ್ನು (ನೊಂದಾಣಿ ಪತ್ರದ ಪ್ರತಿಯೊಂದಿಗೆ) ಹಾಗೂ ಯಾದಗಿರಿ ಜಿಲ್ಲೆಯ ತಮ್ಮ ವಾಸಸ್ಥಳ ದೃಡೀಕರಣ ಪ್ರತಿ ರೇಶನ ಕಾರ್ಡ/ ಓಟರ್ ಐ.ಡಿಯೊಂದಿಗೆ ದಿನಾಂಕ : 21.03.2025 ರೊಳಗಾಗಿ ಮುಖ್ಯ ಗ್ರಂಥಾಲಯಾಧಿಕಾರಿ, ಜಿಲ್ಲಾ ಕೇಂದ್ರ ಗ್ರಂಥಾಲಯ, ಗ್ರಾಮೀಣ ಪೋಲಿಸ ಠಾಣೆ ರೋಡ, ಪಾಟೀಲ ನಗರ, ಶ್ರೀ ಮಹರ್ಷಿ ವಾಲ್ಮೀಕಿ ಭವನ ಪಕ್ಕದಲ್ಲಿ, ಯಾದಗಿರಿ-585201 ಕಛೇರಿಗೆ ಸಲ್ಲಿಸುವುದು. ಹಾಗೂ ಅವಧಿ ಮೀರಿ ಸಲ್ಲಿಕೆಯಾದ ಗ್ರಂಥಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ.

ಖರೀದಿಗಾಗಿ ಆದೇಶ ನೀಡಿದ ನಂತರ ಆದೇಶದಲ್ಲಿ ನಮೂದಿಸಿದಂತೆ, ಲೇಖಕರು ತಮ್ಮ ಸ್ವಂತ ಖರ್ಚಿನಲ್ಲಿ ಗ್ರಂಥಗಳನ್ನು ಮುಖ್ಯ ಗ್ರಂಥಾಯಾಧಿಕಾರಿ ಕಛೇರಿ, ಜಿಲ್ಲಾ ಕೇಂದ್ರ ಗ್ರ‍್ರಂಥಾಲಯ, ಯಾದಗಿರಿರವರಿಗೆ ಸರಬರಾಜು ಮಾಡಿ ಅವರಿಂದ ಸ್ವೀಕೃತಿ ಪಡೆದು ಹಣ ಪಾವತಿಗಾಗಿ ಬಿಲ್ಲುಗಳನ್ನು ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಮುಖ್ಯ ಗ್ರಂಥಾಲಯಾಧಿಕಾರಿ, ಜಿಲ್ಲಾ ಕೇಂದ್ರ ಗ್ರಂಥಾಲಯ, ಯಾದಗಿರಿರವರನ್ನು ಸಂಪರ್ಕಿಸುವುದು. ಖರೀದಿಗಾಗಿ ಆದೇಶ ನೀಡಿದ ನಂತರ ಆದೇಶದಲ್ಲಿ ನಮೂದಿಸಿದಂತೆ, ಲೇಖಕರು ತಮ್ಮ ಸ್ವಂತ ಖರ್ಚಿನಲ್ಲಿ ಗ್ರಂಥಗಳನ್ನು ಮುಖ್ಯ ಗ್ರಂಥಾಯಾಧಿಕಾರಿ ಕಛೇರಿ, ಜಿಲ್ಲಾ ಕೇಂದ್ರ ಗ್ರ‍್ರಂಥಾಲಯ, ಯಾದಗಿರಿರವರಿಗೆ ಸರಬರಾಜು ಮಾಡಿ ಅವರಿಂದ ಸ್ವೀಕೃತಿ ಪಡೆದು ಹಣ ಪಾವತಿಗಾಗಿ ಬಿಲ್ಲುಗಳನ್ನು ಸಲ್ಲಿಸುವುದು. ಆಯ್ಕೆಗಾಗಿ ಸಲ್ಲಿಸುವ ಗ್ರಂಥಗಳ ಶೀರ್ಷಿಕೆ ಪುಟದ ಹಿಂಭಾಗದ ಪುಟದಲ್ಲಿ (Imಠಿಡಿiಟಿಣ ಠಿಚಿge) ಈ ಕೆಳಗಿನ ಅಂಶಗಳನ್ನು ಮುದ್ರಿಸುವುದು ಕಡ್ಡಾಯವಾಗಿರುತ್ತದೆ. ಶೀರ್ಷಿಕೆ ಲೇಖಕರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಪುಟಗಳು, ಪುಸ್ತಕದ ಅಳತೆ, ಉಪಯೋಗಿಸಿರುವ ಕಾಗದ, ಗ್ರಂಥಸ್ವಾಮ್ಯ ವಿವರ, ಮುದ್ರಣ ವರ್ಷ, ಆವೃತ್ತಿ, ಬೆಲೆ, ಮುಖಪುಟ, ಪುಸ್ತಕದ ಒಳಪುಟ ವಿನ್ಯಾಸ, ರೇಖಾಚಿತ್ರಗಾರರ ಹೆಸರು ಮತ್ತು ಪ್ರಕಾಶಕರು ಹಾಗೂ ಮುದ್ರಕರ ವಿಳಾಶ ಮುದ್ರಿಸಿರಬೇಕು.

ಸರ್ಕಾರದ ಆದೇಶ ಸಂ. ಇಡಿ 283 ಎಲ್‌ಐಬಿ 2009, ಬೆಂಗಳೂರು ದಿನಾಂಕ : 14.06.2010 ಮತ್ತು ಸರ್ಕಾರದ ಆದೇಶ ಸಂ. ಇಡಿ 234 ಎಲ್‌ಐಬಿ 2015, ಬೆಂಗಳೂರು ದಿನಾಂಕ : 22.12.2017 ರಲ್ಲಿ ತಿಳಿಸಿರುವ ಪುಸ್ತಕ ಅಳತೆಗೆ ಅನುಗುಣವಾಗಿ ಮುದ್ರಿಸಿರುವ ಪುಸ್ತಕಗಳನ್ನು ಮಾತ್ರ ಆಯ್ಕೆಗೆ ಸ್ವೀಕರಿಸಲಾಗುವುದು. ಪುಸ್ತಕದ ಅಳತೆ ಸರಿಯಾಗಿಲ್ಲದ (Uಟಿsize booಞs) ಹಾಗೂ ಹೆಚ್ಚು-ಕಡಿಮೆ ಅಳತೆಗಳಿದ್ದಲ್ಲಿ ಕಡಿಮೆ ಅಳತೆಗೆ ಅನುಗುಣವಾಗಿ ದರವನ್ನು ನಿಗದಿಪಡಿಸಲಾಗುವುದು. ಸರ್ಕಾರವು ನಿಗದಿಪಡಿಸಲಾದ ಅಳತೆಯ ಕಾಗದವನ್ನು ಮಾತ್ರ ಮುದ್ರಣಕ್ಕೆ ಬಳಸುವುದು. ಕಡಿಮೆ ಗುಣಮಟ್ಟದ ಕಾಗದವನ್ನು ಬಳಸಿ ಪುಸ್ತಕವನ್ನು ಮುದ್ರಿಸಿದಲ್ಲಿ ಅಂತಹ ಪುಸ್ತಕಗಳನ್ನು ಆಯ್ಕೆ ಮಾಡದೇ ತಿರಸ್ಕರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮುಖ್ಯ ಗ್ರಂಥಾಲಯಾಧಿಕಾರಿ, ಜಿಲ್ಲಾ ಕೇಂದ್ರ ಗ್ರಂಥಾಲಯ, ಯಾದಗಿರಿರವರನ್ನು ಸಂಪರ್ಕಿಸುವುದು. ಕಡ್ಡಾಯವಾಗಿ ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು ಪುಸ್ತಕದ ಒಂದು ಪ್ರತಿ. ಕಾಪಿರೈಟಿನ ನೊಂದಣಿಯ ದೃಢೀಕರಿಸಿದ ನಕಲು ಪ್ರತಿ. ವಿತರಕರು ಸರಬರಾಜು ಹಕ್ಕನ್ನು ಪಡೆದಿದ್ದಲ್ಲಿ ಅದರ ನಕಲು ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸುವುದು. ಈ ದಾಖಲಾತಿಗಳು ಇಲ್ಲದಿದ್ದಲ್ಲಿ ಪುಸ್ತಕಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net