

ಬೆಂಗಳೂರು: ಬೆಂಗಳೂರು ವಿಜ್ಞಾನ ವೇದಿಕೆ ಮತ್ತು ಕೃಷಿ ಭಾರತ್ ಫೌಂಡೇಶನ್ ಹಾಗೂ ಜನ ಪ್ರಕಾಶನ ಸಹಯೋಗದಲ್ಲಿ ಸೆ. 14ರಂದು ಪರಿಸರ ತಜ್ಞ ಡಾ. ಅ.ನ. ಯಲ್ಲಪ್ಪ ರೆಡ್ಡಿ ಅವರ ‘ಮೇದಿನಿ ಜೊತೆ ನನ್ನ ಕಥೆ’ ನೆನಪುಗಳು ಮತ್ತು ಸಮಕಾಲೀನ ಸಂಗತಿಗಳ ಪರಾಮರ್ಶೆ ಕೃತಿ ಲೋಕಾರ್ಪಣೆ ಸಮಾರಂಭ ಆಯೋಜಿಸಿದೆ.
ನಗರದ ಬಸವನಗುಡಿಯ ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣದಲ್ಲಿ ಅಂದು ಬೆಳಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾ. ಎಚ್.ಎನ್. ನಾಗಮೋಹನದಾಸ್, ಪರಿಸರ ವಿಜ್ಞಾನಿ ನಾಗೇಶ ಹೆಗಡೆ, ಎನ್.ಇ.ಎಸ್. ಕಾರ್ಯದರ್ಶಿ ವೆಂಕಟಶಿವ ರೆಡ್ಡಿ, ಬರಹಗಾರ ಡಾ. ಚಂದನ್ ಗೌಡ, ಕೃಷಿ ಭಾರತ್ ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕ ಟಿ.ಸಿ. ರವೀಂದ್ರ ಮೊದಲಾದವರು ಭಾಗವಹಿಸಲಿದ್ದಾರೆ.