ಕನ್ನಡ ಭಾಷೆ ತಿಳಿದುಕೊಳ್ಳಲು ನಿಘಂಟು ಸಹಕಾರಿ : ತಾರಾನಾಥ ಗಟ್ಟಿ ಹೇಳಿಕೆ

New Project (6)
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಕನ್ನಡ ಭಾಷೆ ಅಭಿವೃದ್ಧಿ ಹೊಂದುತ್ತಿರುವಂತೆ ಕನ್ನಡ- ಮಲಯಾಳಂ ನಿಘಂಟು ಪ್ರಸ್ತುತತೆ ಪಡೆಯುತ್ತಿದೆ. ಎಲ್ಲ ಭಾಷೆ ಏಕೀಕೃತ ರೂಪ ಹೊಂದಿವೆ. ಮಲಯಾಳಂ, ತುಳು, ಕನ್ನಡ ಭಾಷೆಗಳ ಮಧ್ಯೆ ಪರಸ್ಪರ ಸಂಬಂಧ ಇದೆ. ಮಲಯಾಳ ಭಾಷಿಗರಿಗೆ ಕನ್ನಡ ಭಾಷೆ ಬಗ್ಗೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಕನ್ನಡ-ಮಲಯಾಳ ಭಾಷಾ ನಿಘಂಟು ಸಹಕಾರಿ ಎಂದು ಕರ್ನಾಟಕ ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಹೇಳಿದರು.

ಕಾಸರಗೋಡಿನ ನಗರ ಸಭಾ ಸಮ್ಮೇಳನ ಸಭಾಂಗಣದಲ್ಲಿ ನಿವೃತ್ತ ಸರ್ಕಾರಿ ಅಧಿಕಾರಿ ಉದುಮ ಆರಾಟುಕಡವು ನಿವಾಸಿ ಬಿ.ಟಿ.ಜಯರಾಮ್ ರಚಿಸಿರುವ ಮಲಯಾಳ- ಕನ್ನಡ ಶಬ್ದಕೋಶದ ಬೃಹತ್ ಗ್ರಂಥದ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಕರ್ನಾಟಕ ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಪುಸ್ತಕ ಬಿಡುಗಡೆಗೊಳಿಸಿದರು. ಶಾಸಕ ಇ.ಚಂದ್ರಶೇಖರನ್ ತಾರಾನಾಥ ಗಟ್ಟಿ ಅವರಿಂದ ಪುಸ್ತಕ ಸ್ವೀಕರಿಸಿದರು. ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು.

ಸಂಸ್ಥೆ ನಿರ್ದೇಶಕ ಡಾ.ಸತ್ಯನ್ ಎಂ. ಪ್ರಾಸ್ತಾವಿಕ ಮಾತನಾಡಿದರು. ಲೇಖಕಿ, ಅನುವಾದಕಿ ಡಾ.ಮೀನಾಕ್ಷಿ ರಾಮಚಂದ್ರನ್ ಪುಸ್ತಕ ಪರಿಚಯ ಮಾಡಿದರು. ಕಾಸರಗೋಡು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ, ಕೇಂದ್ರ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಅನುವಾದಕ ಕೆ.ವಿ.ಕುಮಾರನ್, ನಿಘಂಟು ರಚನಾಕಾರ ಕಾಸರಗೋಡು ಜಿಲ್ಲಾ ನಿವೃತ್ತ ಮಾಹಿತಿ ಅಧಿಕಾರಿ ಬಿ.ಟಿ.ಜಯರಾಮ್ ಉಪಸ್ಥಿತರಿದ್ದರು. ಕೇರಳ ಭಾಷಾ ಸಂಸ್ಥೆ ಸಂಶೋಧನಾ ಅಧಿಕಾರಿ ಕೆ.ಆರ್.ಸರಿತಾ ಕುಮಾರಿ ಸ್ವಾಗತಿಸಿದರು. ಕೇರಳ ಭಾಷಾ ಸಂಸ್ಥೆ ಪಿಆರ್‌ಒ ರಫಿ ಪೂಕೋಮ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net