

ಕಲಬುರಗಿಯ ದಿಶಾ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರ ವೇದಿಕೆಯಿಂದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗಾಗಿ ರಚಿಸಿರುವ `ಐ ಕ್ಯಾನ್ ಪಾಸ್ ಪಿಯುಸಿ ಸೆಕೆಂಡ್ ಇಯರ್ ಇಂಗ್ಲಿಷ್' ಪುಸ್ತಕ ಶುಕ್ರವಾರ ಬಿಡುಗಡೆ ಮಾಡಲಾಯಿತು. ಸಂಘದ ಸಲಹೆಗಾರ ಅರುಣಕುಮಾರ ಪಾಟೀಲ್, ಬಸವರಾಜ ಬಿರಾಜದಾರ, ಜೆ.ಮಲ್ಲಪ್ಪ, ಶಿವಾನಂದ ಖಜೂರ್ಗಿ, ವೇದಿಕೆ ಅಧ್ಯಕ್ಷ ರಾಜೇಂದ್ರ ರಂಗದಾಳ, ಶೆಲ್ವಿ ದೇಶಮಾನೆ ಇತರರಿದ್ದರು.