ಸಾವಿತ್ರಮ್ಮ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ

BBLF
Published on

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘ ಕೊಡಮಾಡುವ ಹಿರಿಯ ಲೇಖಕಿ ಎಚ್.ವಿ. ಸಾವಿತ್ರಮ್ಮ ದತ್ತಿ ಪ್ರಶಸ್ತಿಗೆ ಲೇಖಕಿಯರಿಂದ ಕೃತಿಗಳನ್ನು ಆಹ್ವಾನಿಸಲಾಗಿದೆ.


2020ನೇ ಸಾಲಿಗೆ ಕಥಾ ಸಂಕಲನ, 2021ನೇ ಸಾಲಿಗೆ ಅನುವಾದ ಸಾಹಿತ್ಯ (ಯಾವುದೇ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡಿರಬೇಕು), 2022ನೇ ಸಾಲಿಗೆ ಕಾದಂಬರಿ ಹಾಗೂ 2023ನೇ ಸಾಲಿಗೆ ಕಥಾ ಸಂಕಲನಗಳನ್ನು ಆಹ್ವಾನಿಸಿದೆ. ಜೂ.25ರೊಳಗೆ ಆಯಾ ಪ್ರಕಾರಗಳಲ್ಲಿ ಮೂರು ಪ್ರತಿಗಳಲ್ಲಿ ಕೃತಿಗಳನ್ನು ಕಳುಹಿಸಲು ಸೂಚಿಸಿದೆ. ಲೇಖಕಿಯರ ಪರವಾಗಿ ಪ್ರಕಾಶಕರೂ ಕೃತಿಗಳನ್ನು ಕಳುಹಿಸಬಹುದು. ಲೇಖಕಿಯರ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು ಕಳಿಸಬೇಕು.


ಕನ್ನಡದ ಖ್ಯಾತ ಬರಹಗಾರರಾದ ಎಚ್. ವಿ. ಸಾವಿತ್ರಮ್ಮನವರು ಉತ್ತಮ ಅನುವಾದಕರು ಹಾಗೂ ಕಥೆಗಾರರಾಗಿದ್ದು, ಅವರ ಹೆಸರಿನ ದತ್ತಿ ಪ್ರಶಸ್ತಿಯನ್ನು ಕರ್ನಾಟಕ ಲೇಖಕಿಯರ ಸಂಘದಲ್ಲಿ ಸ್ಥಾಪಿಸಲಾಗಿದೆ. ಪ್ರಶಸ್ತಿಯು 25 ಸಾವಿರ ರೂ. ನಗದು ಹಾಗೂ ಲಕಗಳನ್ನು ಒಳಗೊಂಡಿದೆ ಎಂದು ಸಂಘದ ಅಧ್ಯಕ್ಷೆ ಡಾ. ಎಚ್.ಎಲ್. ಪುಷ್ಪಾ ತಿಳಿಸಿದ್ದಾರೆ.


ವಿಳಾಸ: ಕರ್ನಾಟಕ ಲೇಖಕಿಯರ ಸಂಘ, 206, 2ನೇ ಮಹಡಿ, ವಿಜಯ ಮ್ಯಾನ್ಷನ್, 2ನೇ ತಿರುವು, 2ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು -560018. ಮೊಬೈಲ್: 9480051222, 8073765665.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net