ಕುರಿಯ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ

New Project (85)
Published on

ಪುತ್ತೂರು ಗ್ರಾಮಾಂತರ: ಅನೇಕ ಮಕ್ಕಳ ಮನೆಯಲ್ಲಿ ಕಷ್ಟವಿದೆ ಎಂಬುದನ್ನು ಅರಿತುಕೊಂಡು ವಿದ್ಯೆಗೆ ನೆರವಾಗುವ ಉದ್ದೇಶದಿಂದ ಪ್ರತಿ ವರ್ಷ ಮಕ್ಕಳಿಗೆ ಪುಸ್ತಕ ವಿತರಣೆ ಮಾಡುತ್ತಿದ್ದೇನೆ. ಮಕ್ಕಳು ಕಲಿತು, ಎಲ್ಲರಿಗೂ ಗೌರವ ಕೊಡುವ ಪ್ರವೃತ್ತಿಯನ್ನು ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕು ಎಂದು ಆರ್ಯಾಪು ಗ್ರಾ.ಪಂ. ಸದಸ್ಯ ಬೂಡಿಯಾರ್ ಪುರುಷೋತ್ತಮ ರೈ ಹೇಳಿದರು.

ಕುರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಗುರುವಾರ ಬರೆಯುವ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಅವರು ಅಧ್ಯಕ್ಷತೆ ವಹಿಸಿದ್ದರು. ಯೂಸುಫ್ ರೆಂಜಲಾಡಿ, ಶಿಕ್ಷಕಿಯರಾದ ನಳಿನಿ ಕೆ., ಕಾವ್ಯಾ ಉಪಸ್ಥಿತರಿದ್ದರು. ಪ್ರಭಾರ ಮುಖ್ಯ ಶಿಕ್ಷಕ ನವೀನ್ ಕುಮಾರ್ ಪ್ರಸ್ತಾವನೆಗೈದರು. ಶಾಲಾ ನಾಯಕಿ ಹಿನಾ ಫಾತಿಮಾ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಶಿಕ್ಷಕಿ ಕವಿತಾ ಪಿ.ಎನ್. ವಂದಿಸಿದರು. ಶಿಕ್ಷಕಿ ದಿವ್ಯಜ್ಯೋತಿ ಕೆ. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net