ಬಿಳಿನೆಲೆ ಶಾಲೆ ವಿವಿಧ ಸಂಘಗಳ ಉದ್ಘಾಟನೆ

New Project (84)
Published on

ಸುಬ್ರಹ್ಮಣ್ಯ: ದೇಶಪ್ರೇಮ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಲು ಶಾಲಾ ಹಂತದಲ್ಲಿ ವಿವಿಧ ಸಂಘಗಳು ಸಹಕಾರಿ ಎಂದು ಶಿಕ್ಷಕ ಆನಂದ ಹೇಳಿದರು.

ಶ್ರೀ ಸುಬ್ರಹ್ಮಣ್ಯ ಮಠ ಎಜುಕೇಶನ್ ಸೊಸೈಟಿ ಆಡಳಿತಕ್ಕೊಳಪಟ್ಟ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ವಿವಿಧ ಸಂಘಗಳನ್ನು ಉದ್ಘಾಟಿಸಿ ಮಾತನಾಡಿದರು.

ಆಡಳಿತ ಮಂಡಳಿ ಕಾರ್ಯದರ್ಶಿ ಶ್ರೀಕೃಷ್ಣ ಶರ್ಮ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಸಂಘದ ಅಧ್ಯಕ್ಷೆ ಶ್ರೇಯಾ, ಕಲಾ ಸಂಘದ ಅಧ್ಯಕ್ಷೆ ಕೀರ್ತನಾ ವಿನೋದ್, ವಿಜ್ಞಾನ ಮತ್ತು ಪರಿಸರ ಸ್ನೇಹಿ ಸಂಘದ ಅಧ್ಯಕ್ಷೆ ಚೈತನ್ಯ ಡಿ.ಎಂ., ಕ್ರೀಡಾ ಸಂಘದ ಅಧ್ಯಕ್ಷೆ ಸೌಜನ್ಯಾ ಕೆ., ಶಾಲಾ ವಿದ್ಯಾರ್ಥಿ ನಾಯಕ ನಮನ್ ಸಿ.ಎಲ್. ಉಪಸ್ಥಿತರಿದ್ದರು. ಮುಖ್ಯ ಗುರು ಸತ್ಯಶಂಕರ್ ಎಂ. ಸ್ವಾಗತಿಸಿದರು. ಶಿಕ್ಷಕಿ ಮಾಲಿನಿ ಎಂ. ವಂದಿಸಿದರು. ಶಿಕ್ಷಕಿ ಲಕ್ಷ್ಮೀ ಈರಕ್ಕನವರ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net