ರಾಜಕೇಸರಿ ಟ್ರಸ್ಟ್‌ನಿಂದ ಪುಸ್ತಕ ವಿತರಣೆ : ಕಾಪಿನಡ್ಕ ಶಾಲೆಯಲ್ಲಿ ಕಾರ್ಯಕ್ರಮ

New Project (15)
Published on

ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ವತಿಯಿಂದ 558ನೇ ಸೇವಾ ಯೋಜನೆ ಅಂಗವಾಗಿ ಬಳಂಜದ ಕಾಪಿನಡ್ಕ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಪುಸ್ತಕ ಹಾಗೂ ಬ್ಯಾಗ್ ಉಚಿತ ವಿತರಣೆ ಕಾರ್ಯಕ್ರಮ ಭಾನುವಾರ ನಡೆಯಿತು.

ಪುಸ್ತಕ ಹಾಗೂ ಬ್ಯಾಗ್ ವಿತರಣೆ ಮಾಡಿ ಬಳಿಕ ಮಾತನಾಡಿದ ಪತ್ರಕರ್ತ ಮನೋಹರ ಬಳಂಜ ಅವರು, ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವುದು ಊರಿನ ಸಂಘ ಸಂಸ್ಥೆಗಳು ಮತ್ತು ಹಳೇ ವಿದ್ಯಾರ್ಥಿಗಳ ಜವಾಬ್ದಾರಿ. ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು, ಸೌಲಭ್ಯಗಳೂ ಗುಣಮಟ್ಟದಿಂದ ಕೂಡಿವೆ. ರಾಜಕೇಸರಿ ಸಂಘಟನೆ ಮಾಡುವ ಕಾರ್ಯ ನೈಜ ಸಮಾಜಸೇವೆಯಾಗಿದೆ ಎಂದರು.

ರಾಜ ಕೇಸರಿ ಸಂಘಟನೆ ಸಂಸ್ಥಾಪಕ ದೀಪಕ್ ಜಿ.ಬೆಳ್ತಂಗಡಿ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಗುರುವಾಯನಕೆರೆ, ಪ್ರಧಾನ ಸಂಚಾಲಕ ಜಗದೀಶ್ ಲಾಯಿಲ, ಸಹ ಸಂಚಾಲಕ ಶರತ್ ಕರಾಯ, ಸಾಮಾಜಿಕ ಜಾಲತಾಣ ವಿಭಾಗದ ಸಂಪತ್, ಸಾಂಸ್ಕೃತಿಕ ಕಾರ್ಯದರ್ಶಿ ದೇವರಾಜ್ ಪೂಜಾರಿ, ಕ್ರೀಡಾ ಕಾರ್ಯದರ್ಶಿ ವಿನೋದ್ ಲಾಯಿಲ, ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್ ಪೂಜಾರಿ, ಕಾಪಿನಡ್ಕ ಗೆಳೆಯರ ಬಳಗ ಕಾರ್ಯದರ್ಶಿ ಯತೀಶ್, ಶಿಕ್ಷಕಿ ಅನಿತಾ, ಪಾಲಕರು ಉಪಸ್ಥಿತರಿದ್ದರು. ಅನುಷಾ ವಂದಿಸಿದರು. ಶಿಕ್ಷಕಿ ಶಾಂತಿವಾಸ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net