ಸಾಧಕರ ಗುಣ ಮಕ್ಕಳಿಗೆ ಆದರ್ಶವಾಗಿರಲಿ : ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಉಮೇಶ್ ನಾಯಕ್ ಕರೆ

New Project (23)
Published on

ಪುತ್ತೂರು ಗ್ರಾಮಾಂತರ: ಊರಿನ ಸಾಧಕರ ಹೆಜ್ಜೆ ಗುರುತುಗಳೊಂದಿಗೆ ಅವರ ಗುಣಗಳನ್ನು ಆದರ್ಶವಾಗಿಟ್ಟುಕೊಂಡು ವಿದ್ಯಾರ್ಥಿಗಳು ಮುಂದೆ ಸಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಹೇಳಿದರು.

ಕೆಯ್ಯೂರಿನ ಕೆಪಿಎಸ್ ಶಾಲೆಯಲ್ಲಿ ಪುತ್ತೂರು ಜನ್ಮ ಫೌಂಡೇಶನ್ ಟ್ರಸ್ಟ್ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಸಹಯೋಗದಲ್ಲಿ ಕುರಿಯ ಮಾಡಾವು ಏಳ್ನಾಡುಗುತ್ತು ಅಮ್ಮಕ್ಕ ತ್ಯಾಂಪಣ್ಣ ರೈ ಸ್ಮರಣಾರ್ಥ ಶುಕ್ರವಾರ ಮಕ್ಕಳಿಗೆ ಪುಸ್ತಕ ವಿತರಣೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೆಪಿಎಸ್ ಕಾರ್ಯಾಧ್ಯಕ್ಷ ಎ.ಕೆ.ಜಯರಾಮ ರೈ ಅಧ್ಯಕ್ಷತೆ ವಹಿಸಿದ್ದರು. ಕೆಪಿಎಸ್ ಪ್ರಾಂಶುಪಾಲೆ ಹಸೀನಾ ಬಾನು, ಉಪಪ್ರಾಂಶುಪಾಲ ಕೆ.ಎಸ್.ವಿನೋದ್‌ಕುಮಾರ್, ಕೆಪಿಎಸ್ ಪ್ರಾಥಮಿಕ ವಿಭಾಗ ಮುಖ್ಯ ಶಿಕ್ಷಕ ಬಾಬು, ಎಸ್‌ಡಿಎಂಸಿ ಸದಸ್ಯೆ ಧರಣಿ ಕೆಯ್ಯೂರು, ದೈಹಿಕ ಶಿಕ್ಷಣ ಶಿಕ್ಷಕ ನವೀನ್‌ಕುಮಾರ್, ಶಿಕ್ಷಕರಾದ ಪ್ರಕಾಶ್ ಹುಲಿಗಟ್ಟಿ, ರವಿ ಟಿ., ವಸಂತಿ, ಶಾಲಿನಿ, ಶೈಲಜಾ, ಪ್ರಸಿಲ್ಲಾ, ಆದಿತ್ಯ ಹೆಬ್ಬಾರ್, ಅತಿಥಿ ಶಿಕ್ಷಕರಾದ ಗೀತಾ, ಕಮಲ, ಎಲ್‌ಕೆಜಿ ಶಿಕ್ಷಕಿಯರಾದ ಸೌಮ್ಯ, ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು. ಜನ್ಮ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವು ಸ್ವಾಗತಿಸಿದರು. ಶಿಕ್ಷಕಿ ಸಂಧ್ಯಾ ವಂದಿಸಿದರು. ಶಿಕ್ಷಕಿ ಸುಪ್ರಭಾ ಪಿ. ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾಸಿರಿ ಪುರಸ್ಕಾರ ಪ್ರದಾನ

ಎಲ್‌ಕೆಜಿ ಮತ್ತು ಯುಕೆಜಿಯ 84 ವಿದ್ಯಾರ್ಥಿಗಳಿಗೆ ಚಿತ್ರಕ್ಕೆ ಬಣ್ಣ ತುಂಬಿಸುವ ಪುಸ್ತಕಗಳನ್ನು ವಿತರಿಸಲಾಯಿತು. ಅತಿ ಹೆಚ್ಚು ಅಂಕ ಗಳಿಸಿರುವ ಕನ್ನಡ ಮಾಧ್ಯಮ ವಿಭಾಗದ 1ರಿಂದ 8ನೇ ತರಗತಿಯ 8 ವಿದ್ಯಾರ್ಥಿಗಳು ಹಾಗೂ ಆಂಗ್ಲ ಮಾಧ್ಯಮ ವಿಭಾಗದ 1ರಿಂದ 5ನೇ ತರಗತಿವರೆಗಿನ 5 ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಪುರಸ್ಕಾರ ನೀಡಲಾಯಿತು. 8ನೇ ತರಗತಿ ವಿದ್ಯಾರ್ಥಿನಿ ನಿಶಾ ಡಿ. ಅವರನ್ನು ವಿದ್ಯಾಸಿರಿ ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net