ಉದ್ಘಾಟನೆಗೂ ಮುನ್ನವೇ ಬಾಯ್ಲರ್ ಸ್ಪೋಟ ಕಾರ್ಮಿಕರಿಗೆ ಗಾಯ

img_3316-1.jpg
Published on

ಬಿಡದಿ:  ಕೆಪಿಟಿಸಿಎಲ್ ಪವರ್ ಕಾರ್ಪೊರೇಷನ್ ವಿದ್ಯುತ್ ಉತ್ಪಾದನ ಘಟಕದಲ್ಲಿ ಬಾಯ್ಲರ್‌ ಸ್ಪೋಟ‌ಗೊಂಡು

ಐದು ಮಂದಿ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ.

ಬಿಡದಿಯ ಭೈರಮಂಗಲ ಕ್ರಾಸ್  ಬಳಿ ಇರುವ ವಿದ್ಯುತ್ ಉತ್ಪಾದನ ಘಟಕದಲ್ಲಿ ಶನಿವಾರ ಸಂಜೆ ಅವಘಡ  ಸಂಭವಿಸಿದೆ. ಬಾಯ್ಲರ್ ಸ್ಪೋಟದಿಂದಾಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ  ಕಾರ್ಮಿಕರಾದ 

ಅಮಲೇಶ್,ಉಮೇಶ್, ಸಂಟೋನ, ತಕೂನ, ಲಕನ್ ಅವರುಗಳಿಗೆ ಗಂಭೀರ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಾಯ್ಲರ್ ಸ್ಪೋಟ ಗೊಳ್ಳುತ್ತಿದಂತೆ ಬೆಂಕಿಯ ಕೆಂಡದ ಜೊತೆಗೆ ಬೀಸಿ ಬೂದಿ  ಬಾಯ್ಲರ್ ಕೆಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಸುರಿದಿದೆ. ಇದರಿಂದಾಗಿ ಕಾರ್ಮಿಕರ ದೇಹಗಳು ಸುಟ್ಟ ಸುಟ್ಟ ಗಾಯಗಳಾಗಿವೆ. 

ಉದ್ಘಾಟನೆಗು ಮುನ್ನವೇ ಅವಘಡ: ಬಿಬಿಎಂಪಿ ವ್ಯಾಪ್ತಿಯಲ್ಲಿನ ಕಸವನ್ನ ತಂದು ಈ ಕಾರ್ಖಾನೆಯಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆ ರೂಪಿಸಿ ಕಾರ್ಖಾನೆಯನ್ನ ನಿರ್ಮಾಣ ಮಾಡಲಾಗಿತ್ತು. 253 ಕೋಟಿ ರೂ ವೆಚ್ಚದಲ್ಲಿ ಘಟಕವನ್ನ  ನಿರ್ಮಾಣ ಮಾಡಲಾಗಿತ್ತು. ಐಸಾಕ್ ಎಂಬ ಕಂಪನಿಗೆ  ಟೆಂಡರ್ ನೀಡಲಾಗಿತ್ತು. ಮುಂದಿನ ವಾರ ಸಿಎಂ‌ ಸಿದ್ದರಾಮಯ್ಯ ಅವರು ಈ‌ ವಿದ್ಯುತ್ ಉತ್ಪಾದನಾ ಘಟಕವನ್ನ ಲೋಕಾರ್ಪಣೆ ಮಾಡುವ ಸಮಯ ನಿಗಧಿಯಾಗಿತ್ತು. ಹಾಗಾಗಿ 

ಶನಿವಾರ  ಪ್ರಾಯೋಗಿಕವಾಗಿ ವಿದ್ಯುತ್ ಉತ್ಪಾದನೆ ಆರಂಭಿಸಲಾಗಿತ್ತು. ಅಧಿಕೃತ ಉದ್ಘಾಟನೆಗೂ ಮುನ್ನವೆ ಘಟಕದಲ್ಲಿ ಅವಘಡ ನಡೆದು ಹೋಗಿದೆ. 

ಇನ್ನೂ ಘಟನಾ ಸ್ಥಳಕ್ಕೆ ರಾಮನಗರ ಎಎಸ್ಪಿ ಗಳಾದ ಸುರೇಶ್, ರಾಮಚಂದ್ರಯ್ಯ, ಬಿಡದಿ ಠಾಣೆ ಸಿಪಿಐ ಶಂಕರ್ ನಾಯಕ್ ಹಾಗೂ ಕೆಪಿಟಿಸಿಎಲ್ ನ ಹಿರಿಯ ಅಧಿಕಾರಿಗಳು ಭೇಟಿ ನೀಡಿ  ಪರಿಶೀಲನೆ ನಡೆಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net