

ಹಾರೋಹಳ್ಳಿ: ಮರಳವಾಡಿ ಅನ್ನಪೂರ್ಣೇಶ್ವರಿ ಆಶ್ರಮದ ಸಮೀಪದ ರಾವತ್ತಿನಹಳ್ಳದ ಬಳಿ ಯುವಕನೊಬ್ಬನ ಶವ ಪತ್ತೆಯಾಗಿದೆ.
ಬೆಂಗಳೂರು ರಸ್ತೆ ಊದಿಪಾಳ್ಯ ಸಮೀಪದ ಲ್ಮಪುರ ನಿವಾಸಿ ಜಿ.ಲಿಖಿತ್(30) ಮೃತ.
ಲಿಖಿತ್ ಸ್ನೇಹಿತರಾದ ಹರೀಶ್, ವೆಂಕಟೇಶ್, ಕಿರಣ ಹಾಗೂ ಹರೀಶ್ ಎಂಬುವವರ ಮೇಲೆ ಅನುಮಾನ ವ್ಯಕ್ತಪಡಿಸಿ ಮೃತನ ಪಾಲಕರು ಹಾರೋಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶವದ ಕತ್ತು, ತಲೆ ಹಾಗೂ ಹಲವೆಡೆ ತೀವ್ರ ತರಹದ ಪೆಟ್ಟು ಬಿದ್ದಿರುವುದು ಕಂಡು ಬಂದಿದ್ದು, ಹಣಕಾಸಿನ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆಮಾಡಲಾಗಿದೆ ಎಂದು ಶಂಕಿಸಲಾಗಿದೆ.
ಹಾರೋಹಳ್ಳಿ, ಕಗ್ಗಲಿಪುರ ಪೊಲೀಸರು ಹಾಗೂ ರಾಮನಗರ ಡಿವೈಎಸ್ಪಿ ದಿನಕರ್ಶೆಟ್ಟಿ, ಹಾರೋಹಳ್ಳಿ ಸರ್ಕಲ್ ಇನ್ಸ್ಪೆಕ್ಟರ್ ಅರ್ಜುನ್ ಸ್ಥಳ ಪರಿಶೀಲಿಸಿದರು.