ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದವ ಮಂಡ್ಯ ಶಿಂಷಾ ನದಿಯಲ್ಲಿ ಶವವಾಗಿ ಪತ್ತೆ; ಕೊಲೆ ಮಾಡಿ ನೀರಿಗೆಸೆದಿರುವ ಶಂಕೆ..

Untitled-1
Published on

ಮಂಡ್ಯ: ರಾಜಧಾನಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಮಂಡ್ಯ ಜಿಲ್ಲೆಯ ಶಿಂಷಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಸಾವಿಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆಯಾದರೂ, ಯಾರೋ ಕೊಲೆ ಮಾಡಿ ಶವ ನದಿಗೆ ಎಸೆದಿರುವ ಅನುಮಾನವೂ ಉಂಟಾಗಿದೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಅಮೃತೇಶ್ವರನಹಳ್ಳಿಯ ನಿವಾಸಿ ಸುರೇಶ್​ (27) ಸಾವಿಗೀಡಾಗಿರುವ ಯುವಕ. ಈತನ ಶವ ಕೊಕ್ಕರೆ ಬೆಳ್ಳೂರು ಬಳಿ ಶಿಂಷಾ ನದಿಯಲ್ಲಿ ಕಂಡುಬಂದಿದೆ.

ಸುರೇಶ್ ಬೆಂಗಳೂರಿನ ಯಶವಂತಪುರದ ಎಪಿಎಂಸಿ ಯಾರ್ಡ್​ನಲ್ಲಿ ಕೆಲಸ ಮಾಡುತ್ತಿದ್ದು, ನಂದಿನಿ ಬಡಾವಣೆಯಲ್ಲಿ ಸ್ನೇಹಿತರೊಂದಿಗೆ ವಾಸವಾಗಿದ್ದ. ಶವದ ಮುಖ, ಕುತ್ತಿಗೆ ಭಾಗದಲ್ಲಿ ಗಾಯಗಳಾಗಿದ್ದು, ನಿನ್ನೆ ರಾತ್ರಿ ಕೊಲೆ ಮಾಡಿ ನೀರಿಗೆ ಎಸೆದಿರಬಹುದು ಎಂಬ ಅನುಮಾನ ಉಂಟಾಗಿದೆ. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net