ಸಮುದ್ರ ತಟದಲ್ಲಿ ಅಪರಿಚಿತ ಮಹಿಳೆ ಶವ

Dead Body
Published on

ಕೋಟ: ಸಾಲಿಗ್ರಾಮದ ಪಾರಂಪಳ್ಳಿ ಪಡುಕರೆ ಸಮುದ್ರ ಕಿನಾರೆಯಲ್ಲಿ ಸುಮಾರು 35ರಿಂದ 45 ವರ್ಷದ ಅಪರಿಚಿತ ಮಹಿಳೆ ಶವ ಪತ್ತೆಯಾಗಿದೆ. ಶುಕ್ರವಾರ ಬೆಳಗ್ಗೆ ಪಾರಂಪಳ್ಳಿ ಗ್ರಾಮದ ಕೋಡಿ ಸಮುದ್ರ ಕಿನಾರೆಯಲ್ಲಿ ಶವ ಕೊಳೆತ ರೀತಿಯಲ್ಲಿ ತೇಲುತ್ತಿರುವುದನ್ನು ನೋಡಿ ಸ್ಥಳೀಯರು ಕೋಟ ಪೊಲೀಸ್ ಠಾಣೆಗೆ ತಿಳಿಸಿದ್ದು, ತಕ್ಷಣ ಪೊಲೀಸ್ ಉಪನಿರೀಕ್ಷಕ ರಾಘವೇಂದ್ರ ಸಿ. ಹಾಗೂ ಸಿಬ್ಬಂದಿ ಪರಿಶೀಲಿಸಿದ್ದಾರೆ. ಮೃತದೇಹ ಬೇರೆ ಭಾಗದಿಂದ ನೀರಿನಲ್ಲಿ ತೇಲಿ ಬಂದಿದ್ದು ಈ ಬಗ್ಗೆ ಕೋಟ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net