

ಕಾರ್ಕಳ: ಮುಡಾರು ಗ್ರಾಮದ ಬಜಗೋಳಿ ಎಂಬಲ್ಲಿ ರಾತ್ರಿ ವೇಳೆಯಲ್ಲಿ ನಿಲ್ಲಿಸಿದ ದ್ವಿಚಕ್ರ ವಾಹನವನ್ನು ಕಳವುಗೈದಿದ್ದಾರೆ. ನೂರಾಲ್‌ಬೆಟ್ಟು ನಿವಾಸಿ ಅಮೃತ್ ರಾಜ್ (44) ಎಂಬುವರು ಬೈಕನ್ನು ಜ.11ರಂದು ಬಜಗೋಳಿಯಲ್ಲಿ ರಾತ್ರಿ 10ಕ್ಕೆ ನಿಲ್ಲಿಸಿ ಅದರ ಕೀ ತೆಗೆಯಲು ಮರೆತು ಹೋಗಿದ್ದು, ಮರುದಿನ ಬೆಳಗ್ಗೆ ನೋಡಿದಾಗ ಬೈಕ್ ಇಲ್ಲದೇ ಇದ್ದು ಯಾರೋ ಕಳ್ಳರು ಕಳವು ಮಾಡಿದ್ದಾರೆ ಎಂದು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.