ರೈಲ್ವೆ ಹಳಿಯಲ್ಲಿ ಮೃತದೇಹ ಪತ್ತೆ

crime
Published on

ಕಾಸರಗೋಡು: ನೀಲೇಶ್ವರ ಕೊಟ್ರಚ್ಚಾಲ್ ನಿವಾಸಿ, ಆಟೋರಿಕ್ಷಾ ಚಾಲಕರ ಯೂನಿಯನ್ ಜಿಲ್ಲಾ ಸಮಿತಿ ಅಧ್ಯಕ್ಷ ವಿ.ವಿ ಸುಧಾಕರನ್(61) ಎಂಬುವರ ಮೃತದೇಹ ಪಡನ್ನಕ್ಕಾಡ್ ರೈಲ್ವೆ ಮೇಲ್ಸೇತುವೆ ಬಳಿ ಪತ್ತೆಯಾಗಿದೆ. ಕಾಂಗ್ರೆಸ್ ಹೊಸದುರ್ಗ ಬ್ಲಾಕ್ ಮಾಜಿ ಕಾರ್ಯದರ್ಶಿಯಾಗಿದ್ದರು. ತನ್ನ ಸ್ನೇಹಿತರೊಬ್ಬರಿಗೆ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿ ‘ನನ್ನನ್ನು ಕ್ಷಮಿಸಿ, ನಿಮ್ಮ ಕ್ಷಮೆ ಯಾಚಿಸುತ್ತಿದ್ದೇನೆ’ ಎಂಬ ಸಂದೇಶ ರವಾನಿಸಿದ್ದರೆನ್ನಲಾಗಿದೆ. ಹೊಸದುರ್ಗ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net