

ಕಾರವಾರ:ಇಲ್ಲಿನ ಕಡವಾಡದಲ್ಲಿ ಮಂಗಳವಾರ ಸ್ವಾತಂತ್ರೊತ್ಸವದ ಅಂಗವಾಗಿ ಆಯೋಜಿಸಿದ್ದ ಫೈಬರ್ ದೋಣಿ (ಕಯಾಕಿಂಗ್) ಚಾಲನಾ ಸ್ಪರ್ಧೆ ಗಮನ ಸೆಳೆಯಿತು.
ಪುರುಷರು, ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆಗಳು ನಡೆದವು, ಕಾಳಿ ಹಿನ್ನೀರಿನಲ್ಲಿ 100 ಮೀಟರ್ ದೋಣಿ ಓಡಿಸುವ ಸ್ಪರ್ಧೆ ನಡೆಯಿತು.
ಕಡವಾಡ ಭೋವಿವಾಡದ ಗಜಾನನ ಯುವಕ ಮಂಡಳ ಹಾಗೂ ಭೋವಿ ಸಮಾಜ ಸೇವಾ ಸಂಘದಿಂದ ಆಯೋಜಿಸಿದ್ದ ಸ್ಪರ್ಧೆಗೆ ಕಡಲ ಜೀವಿ ರಕ್ಷಣೆ ವಿಭಾಗದ ಆರ್‌ಎಫ್‌ಒ ಪ್ರಮೋದ ನಾಯಕ ಚಾಲನೆ ನೀಡಿದರು.
ಘನಶ್ಯಾಮ ಪ್ರಿಂಟರ್ಸ್ ಮಾಲೀಕ ಘನಶ್ಯಾಮ ನಾಯ್ಕ, ಗುರುಪ್ರಸಾದ ಶೆಟ್ಟಿ, ಯುವಕ ಮಂಡಳ ಅಧ್ಯಕ್ಷ ಸುಶಾಂತ ಭೋವಿ ಇದ್ದರು.