

ಗಂಗೊಳ್ಳಿ: ಮಳೆಗಾಲ ಆರಂಭವಾಗಿ ತಿಂಗಳು ಕಳೆಯುತ್ತಿದ್ದರೂ, ಉತ್ತಮ ಮಳೆಯಾಗದಿರುವುದರಿಂದ ಮತ್ತು ಕಡಲು ಪ್ರಕ್ಷುಬ್ಧಗೊಳ್ಳದಿರುವುದರಿಂದ ವಾತಾವರಣ ಮಳೆಗಾಲದ ಸಾಂಪ್ರದಾಯಿಕ ಮೀನುಗಾರಿಕೆಗೆ ಇನ್ನೂ ಪೂರಕವಾಗಿಲ್ಲ. ಹೀಗಾಗಿ ಜು.5ರ ಬಳಿಕ ಕಡಲಿಗಿಳಿಯಲು ಮೀನುಗಾರರು ಸಿದ್ಧತೆ ನಡೆಸುತ್ತಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಈ ಬಾರಿ ಉತ್ತಮ ನಾಡದೋಣಿ ಮೀನುಗಾರಿಕೆ ನಡೆಯುವ ಸಾಧ್ಯತೆಗಳಿವೆ.
ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೀನುಗಾರಿಕೆ ಪ್ರಧಾನ ಉದ್ಯೋಗವಾಗಿರುವುದರಿಂದ ಮೀನುಗಾರರು ನಾಡದೋಣಿಗಳ ಮೂಲಕ ಗಂಗೊಳ್ಳಿ, ಕಂಚುಗೋಡು, ಮರವಂತೆ, ಕೊಡೇರಿ, ಉಪ್ಪುಂದ ಭಾಗದ ಮೀನುಗಾರರು ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ತೊಡಗಿಕೊಂಡ ಮೀನುಗಾರರು ಗಂಗೊಳ್ಳಿ ಲೈಟ್‌ಹೌಸ್ ಬಳಿಯ ಮಡಿಯಲ್ಲಿ ಮೀನನ್ನು ತಂದು ವ್ಯಾಪಾರ ವಾಡುತ್ತಾರೆ. ನೂರಾರು ಸಂಖ್ಯೆಯಲ್ಲಿ ದೋಣಿಗಳು ಮಡಿಯಲ್ಲಿ ಲಂಗರು ಹಾಕುತ್ತವೆ. ಮಳೆಗಾಲದ ಮೀನುಗಾರಿಕೆಗೆ ಲೈಟ್ ಹೌಸ್ ಬಳಿಯಲ್ಲಿರುವ ಮಡಿ ತುಂಬ ಫೇಮಸ್ ಆಗಿದೆ. ಹರಾಜು ಪ್ರಕ್ರಿಯೆ ಮೂಲಕ ವ್ಯಾಪಾರಸ್ಥರು ಮೀನುಗಳನ್ನು ಖರೀದಿಸಿ ರಾಜ್ಯದ ಇತರ ಜಿಲ್ಲೆಗಳಿಗೂ, ಅಂತಾರಾಜ್ಯಕ್ಕೂ ಸಾಗಾಟ ವಾಡುತ್ತಾರೆ. ಹವಾವಾನ ಅನುಕೂಲಕರವಾಗಿದ್ದರೆ ಸರಿ ಸುವಾರು ಒಂದು ತಿಂಗಳು ಸಾಂಪ್ರದಾಯಿಕ ಮೀನುಗಾರಿಕೆ ನಡೆಯುತ್ತದೆ. ಸ್ಥಳೀಯ ವಾರುಕಟ್ಟೆಯಲ್ಲಿಯೂ ವ್ಯಾಪಾರ ಚುರುಕುಗೊಳ್ಳುತ್ತದೆ.
ನಾಡದೋಣಿಗಳ ಮೂಲಕ ಹಿಡಿಯುವ ಮೀನುಗಳಿಗೆ ವಾರುಕಟ್ಟೆಯಲ್ಲಿ ಬಾರಿ ಡಿವ್ಯಾಂಡ್ ಕೂಡ ಇದೆ. ಸಾಂಪ್ರದಾಯಿಕ ಮೀನುಗಾರಿಕೆ ಆರಂಭಗೊಂಡಂತೆ ವಾರುಕಟ್ಟೆಯಲ್ಲಿ ತಾಜಾ ಮೀನುಗಳು ಲಗ್ಗೆ ಇಡುತ್ತದೆ. ವೈಟ್ ಚಟ್ಲಿ, ಕೆಂಪು ಚಟ್ಲಿ, ಜಾರಿ, ಬಗುಂಡೆ, ಪಾಪ್ಲೆಟ್, ಬೈಗೀ ಮೀನಿನ ಖರೀದಿಗೆ ಗ್ರಾಹಕರು ಮುಗಿ ಬೀಳುತ್ತಾರೆ.
ಮಳೆಗಾಲದಲ್ಲಿ ಮೀನುಗಾರರು ನೆಚ್ಚಿಕೊಂಡಿರುವ ನಾಡದೋಣಿ ಮೀನುಗಾರಿಕೆಗೆ ಪೂರಕ ವಾತಾವರಣ ನಿರ್ವಾಣವಾಗುತ್ತಿದ್ದು, ಕಡಲಿನ ಪರಿಸ್ಥಿತಿ ಹಾಗೂ ಹವಾವಾನ ನೋಡಿಕೊಂಡು ಜು.5ರ ನಂತರ ಮೀನುಗಾರರು ಕಡಲಿಗಿಳಿಯುವ ಸಾಧ್ಯತೆ ಇದೆ. ಈಗಾಗಲೇ ನಾಡದೋಣಿ ಮೀನುಗಾರಿಕೆಗೆ ಮೀನುಗಾರರು ಸಿದ್ಧತೆ ನಡೆಸುತ್ತಿದ್ದು, ಪೂರಕ ವಾತಾವರಣ ನಿರ್ವಾಣವಾದಲ್ಲಿ ನಾಡದೋಣಿ ಮೀನುಗಾರಿಕೆ ಪ್ರಾರಂಭವಾಗಲಿದೆ. -ಸುರೇಶ ಖಾರ್ವಿ ಮರವಂತೆ, ಶ್ರೀ ರಾಮ ಮಂದಿರ ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ