ದೋಣಿ ಇಂಜಿನ್​, ಬಲೆ ಬೆಂಕಿಗಾಹುತಿ

Published on

ಕುಂಬಳೆ: ಮೀನುಗಾರಿಕೆ ಬಳಿಕ ಸಮುದ್ರ ದಡದಲ್ಲಿರಿಸಿದ್ದ ದೋಣಿ, ಇಂಜಿನ್​ ಹಾಗೂ ಬಲೆ ಬೆಂಕಿಗಾಹುತಿಯಾಗಿದೆ. ಮುಟ್ಟಂ ಕಡಪ್ಪುರದಲ್ಲಿ ಗುರುವಾರ ಮುಂಜಾನೆ 2.30ರ ವೇಳೆ ಘಟನೆ ನಡೆದಿದೆ.

ಮುಟ್ಟಂ ಬೇರಿಕೆ ಬಂಗರದ ಕೀರ್ತೇಶ್​ ದಾಮೋದರ ಎಂಬುವರ ಮಾಲೀಕತ್ವದ ದೋಣಿ ಇದಾಗಿದೆ. ಮೀನುಗಾರಿಕೆ ಬಳಿಕ ಬುಧವಾರ ಬೆಳಗ್ಗೆ ದೋಣಿ ಬಲೆ ಸಹಿತ ವಿವಿಧ ಸಾಮಗ್ರಿಗಳನ್ನು ಮುಟ್ಟಂ ಕಡಪ್ಪುರದಲ್ಲಿರಿಸಲಾಗಿತ್ತು. ಗುರುವಾರ ಬೆಳಗ್ಗೆ ಮತ್ತೆ ಮೀನುಗಾರಿಕೆಗೆ ತೆರಳಲಿರುವಂತೆಯೇ ಮುಂಜಾನೆ 2.30ರ ವೇಳೆ ದೋಣಿ ಬೆಂಕಿಗಾಹುತಿಯಾದ ವಿಷಯ ತಿಳಿದುಬಂದಿದೆ. ಇತರ ಮೀನು ಕಾರ್ಮಿಕರು ನೀಡಿದ ಮಾಹಿತಿ ಮೇರೆಗೆ ದಾಮೋದರ ಟನೆ ಸ್ಥಳಕ್ಕೆ ತೆರಳಿದ್ದು, ಅಷ್ಟರಲ್ಲಿ ಪೂರ್ಣವಾಗಿ ಉರಿದು ನಾಶಗೊಂಡಿತ್ತು.

ವಿಷಯ ತಿಳಿದು ಕುಂಬಳೆ ಠಾಣೆ ಇನ್​ಸ್ಪೆಕ್ಟರ್​ ಕೆ.ಪಿ.ವಿನೋದ್​ ಕುಮಾರ್​, ಎಸ್​ಐಗಳಾದ ಗಣೇಶ್​, ವಿ.ಕೆ.ವಿಜಯನ್​ ಟನೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net