ನಾಟಿ ಮಾಡೋದಕ್ಕೆ ತೆರಳಲು ಬಿಎಂಟಿಸಿ ನೌಕರನಿಗೆ 8 ದಿನ ವೇತನ ಸಹಿತ ರಜೆ

agri 15 mar 20
Published on

ಬೆಂಗಳೂರು: ಕರೊನಾ ಭೀತಿ ನಡುವೆಯೂ ಕರ್ತವ್ಯ ನಿರ್ವಹಿಸಿದ್ದ ಬಿಎಂಟಿಸಿ ಚಾಲಕರೊಬ್ಬರಿಗೆ ಕೃಷಿ ಕಾರ್ಯ ಮಾಡಲು 8 ದಿನಗಳ ಕಾಲ ವೇತನಸಹಿತ ರಜೆ ನೀಡಲಾಗಿದೆ.

ಪೂರ್ಣಪ್ರಜ್ಞಾ ಲೇಔಟ್ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ.ಎಸ್. ಯೋಗೇಶ್ ಸಕಲೇಶಪುರ ಮೂಲದ ರೈತ ಕುಟುಂಬಕ್ಕೆ ಸೇರಿದವರು. ಗದ್ದೆ ನಾಟಿ ಆರಂಭವಾಗಿದೆ. ಆ ಕೆಲಸ ಮಾಡಿಸಲು ಊರಿಗೆ ಹೋಗಬೇಕೆಂದು ರಜೆಗೆ ಅರ್ಜಿ ಸಲ್ಲಿಸಿದ್ದರು.

ಅದನ್ನು ಪರಿಗಣಿಸಿರುವ ಘಟಕ ಅಧಿಕಾರಿಗಳು ವೇತನಸಹಿತ ರಜೆ ಮಂಜೂರು ಮಾಡಿದ್ದಾರೆ. ಮಾರ್ಚ್ ಅಂತ್ಯದಲ್ಲಿ ಲಾಕ್​ಡೌನ್ ಜಾರಿ ಮಾಡಿದ ಪರಿಣಾಮ ಅಗತ್ಯ ಹಾಗೂ ತುರ್ತು ಸೇವೆ ಬಸ್​ಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಈ ವೇಳೆ ಯೋಗೇಶ್ ಕಾರ್ಯ ನಿರ್ವಹಿಸಿದ್ದರು. ಸಂಕಷ್ಟದ ಸಮಯದಲ್ಲಿ ತೋರಿದ ಕರ್ತವ್ಯಪ್ರಜ್ಞೆ ಪರಿಗಣಿಸಿ ವೇತನಸಹಿತ ರಜೆ ಮಂಜೂರು ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net