ಬಿಎಂಟಿಸಿ ಬಸ್​ಗೆ ಪೊಲೀಸ್ ಮುಖ್ಯಪೇದೆ​ ಬಲಿ!

police death
Published on

ಬೆಂಗಳೂರು: ಬಿಎಂಟಿಸಿ ಬಸ್​ಗೆ ಪೊಲೀಸ್​ ಮುಖ್ಯಪೇದೆಯೊಬ್ಬರು ಬಲಿಯಾದ ಘಟನೆ ಗುರುವಾರ ಮಧ್ಯಾಹ್ನ ನಗರದ ಮಾಗಡಿ ರಸ್ತೆಯಲ್ಲಿ ಸಂಭವಿಸಿದೆ.

ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯ ಹೆಡ್​ಕಾನ್​ಸ್ಟೇಬಲ್ ರಾಮಾಚಾರಿ(47) ಮೃತ ದುರ್ದೈವಿ. ರಾತ್ರಿ ಪಾಳಿ ಕೆಲಸ ಮುಗಿಸಿ ಬೆಳಗ್ಗೆ ಮನೆಗೆ ಬಂದಿದ್ದ ರಾಮಾಚಾರಿ, ವೈಯಕ್ತಿಯ ಕೆಲಸದ ಮೇರೆಗೆ ಬೈಕ್​ನಲ್ಲಿ ಹೊರಬಂದಿದ್ದರು. ಮಾರ್ಗಮಧ್ಯೆ ಮಾಗಡಿ ರಸ್ತೆಯಲ್ಲಿ ಯಮಸ್ವರೂಪಿಯಂತೆ ಬಂದ ಬಿಎಂಟಿಸಿ ಬಸ್​, ಪೇದೆ ಸಂಚರಿಸುತ್ತಿದ್ದ ಬೈಕ್​ಗೆ ಡಿಕ್ಕಿಹೊಡೆದಿದೆ. ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಪೇದೆ ಕೊನೆಯುಸಿರೆಳೆದರು. ಇದನ್ನೂ ಓದಿರಿ ಜಾರಕಿಹೊಳಿ ಸೆಕ್ಸ್​ ಸಿಡಿ ರಿಲೀಸ್​ಗೂ ಮುನ್ನ ದಿನೇಶ್ ಕಲ್ಲಹಳ್ಳಿ ಲಾಡ್ಜ್​ಗೆ ಹೋಗಿದ್ದೇಕೆ? ಸಿಸಿ ಕ್ಯಾಮರಾದಲ್ಲಿ ಸೆರೆ

ಸ್ಥಳಕ್ಕೆ ಬಂದ ಮಾಗಡಿ ರಸ್ತೆ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದರು. ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net