ರಿಕ್ಷಾ ಬಾಡಿಗೆ ದರ ಹೆಚ್ಚಳಕ್ಕೆ ಒತ್ತಾಯ : ಆಟೋ ರಿಕ್ಷಾ ಮಜ್ದೂರ್ ಸಂಘ(ಬಿಎಂಎಸ್) ಕಾಸರಗೋಡು ಜಿಲ್ಲಾ ಪ್ರತಿನಿಧಿ ಸಮ್ಮೇಳನ

01
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ನಿತ್ಯೋಪಯೋಗಿ ಸಾಮಗ್ರಿ, ಇಂಧನ, ಬಿಡಿಭಾಗ ಬೆಲೆ ಏರಿಕೆ, ಆರ್‌ಟಿಒಕಚೇರಿಗಳಲ್ಲಿನ ಶುಲ್ಕದಲ್ಲಿನ ಹೆಚ್ಚಳದ ಹಿನ್ನೆಲೆಯಲ್ಲಿ ಆಟೋರಿಕ್ಷಾ ಬಾಡಿಗೆ ದರ ತಕ್ಷಣ ಹೆಚ್ಚಳಗೊಳಿಸುವಂತೆ ಮುಳ್ಳೇರಿಯಾದಲ್ಲಿ ಆಯೋಜಿಸಲಾದ ಆಟೋ ರಿಕ್ಷಾ ಮಜ್ದೂರ್ ಸಂಘ(ಬಿಎಂಎಸ್)ಪ್ರತಿನಿಧಿ ಸಮ್ಮೇಳನದಲ್ಲಿ ಸರ್ಕಾರವನ್ನು ಆಗ್ರಹಿಸಿದೆ.

ಮುಳ್ಳೇರಿಯ ಗಣೇಶ ಕಲಾಮಂದಿರದಲ್ಲಿ ಆಟೋರಿಕ್ಷಾ ಮಜ್ದೂರ್ ಸಂಘ(ಬಿಎಂಎಸ್) ಕಾಸರಗೋಡು ಜಿಲ್ಲಾ ಪ್ರತಿನಿಧಿ ಸಮ್ಮೇಳನವನ್ನು ಜಿಲ್ಲಾ ಕಾರ್ಯದರ್ಶಿ ಕೆ.ವಿ.ಬಾಬು ಉದ್ಘಾಟಿಸಿದರು.

ಜಿಲ್ಲಾಧ್ಯಕ್ಷ ವಿಶ್ವನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ಜಿಲ್ಲಾ ಜತೆ ಕಾರ್ಯದರ್ಶಿ ಲೀಲಾಕೃಷ್ಣನ್, ಮುಳ್ಳೇರಿಯ ಪ್ರದೇಶ ಸಮಿತಿ ಅಧ್ಯಕ್ಷ ಆನಂದನ್ ಸಿ.ಎಚ್. ಉಪಸ್ಥಿತರಿದ್ದರು. ಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭರತನ್ ಕಲ್ಯಾಣ್ ರಸ್ತೆ ವರದಿ ಮಂಡಿಸಿದರು. ಉಪಾಧ್ಯಕ್ಷೆ ಗೀತಾ ಬಾಲಕೃಷ್ಣನ್ ಪದಾಧಿಕಾರಿಗಳನ್ನು ಘೋಷಿಸಿದರು. ಬಿಎಂಎಸ್ ಜಿಲ್ಲಾ ಸಮಿತಿ ಸದಸ್ಯ ರಾಘವನ್ ಮುಳ್ಳೇರಿಯ ಸಮಾರೋಪ ಭಾಷಣ ಮಾಡಿದರು. ಕೋಶಾಧಿಕಾರಿ ಕುಞಕಣ್ಣನ್ ಆದಾಯ, ವೆಚ್ಚದ ಅಂಕಿ-ಅಂಶ ಮಂಡಿಸಿದರು. ಸದಾಶಿವನ್ ಮುಳ್ಳೇರಿಯ ಸ್ವಾಗತಿಸಿದರು. ಕುಂಞಕಣ್ಣನ್ ಆರಾಲಿಂಕೈ ವಂದಿಸಿದರು.

ಪದಾಧಿಕಾರಿಗಳ ಆಯ್ಕೆ ನಡೆಯಿತು. ಶಿವರಾಮ ಪೆರ್ಲ ಅಧ್ಯಕ್ಷ, ಎ.ಕೇಶವ, ಉಮೇಶ್ ಎಸ್.ಕೆ., ಗಿರೀಶ್ ಅಟ್ಟೆಂಗಾನಂ, ಸದಾಶಿವ ಮುಳ್ಳೇರಿಯ, ಕುಞಿಕಣ್ಣನ್ ಚಾತಂಗೈ, ಕುಞಿಕಣ್ಣನ್ ಅರಯಾಲಿನ್‌ಕೈ ಉಪಾಧ್ಯಕ್ಷರು, ಭರತನ್ ಕಲ್ಯಾಣ್‌ರೋಡ್ ಪ್ರಧಾನ ಕಾರ್ಯದರ್ಶಿ, ಮನೋಜ್ ಕಲ್ಯಾಣಂ, ರಾಗೇಶ್ ಕಾಞಂಗಾಡ್, ಮಿಥುನ್ ನೀಲೇಶ್ವರ, ಬೋಜರಾಜ್ ಕುಂಬಳೆ, ಭಾಸ್ಕರನ್ ಕಾಲಿಚ್ಚಾನಡ್ಕ, ಪ್ರಸಾದ್ ಪರವನಡ್ಕ, ಜತೆ ಕಾರ್ಯದರ್ಶಿ, ವಿಶ್ವನಾಥ ಶೆಟ್ಟಿ ಅವರನ್ನು ಕೋಶಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net