ವಿರಳ ನೀಲಿಗಲ್ಲದ ನೀಲಿ ನೊಣ ಹಿಡುಕ ಪತ್ತೆ !

Blue_Fly_Catcher_01
Published on

ವಿಶೇಷ ವರದಿ

ತುಮಕೂರು: ಮುಸ್ಕಾಕಿಪೀಡೆ ಕುಟುಂಬಕ್ಕೆ ಸೇರಿದ ನೀಲಿಗಲ್ಲದ ನೀಲಿ ನೊಣ ಹಿಡುಕ ಬೆಂಗಳೂರು ಭಾಗದಲ್ಲಿ ಕಾಣಿಸಿಕೊಂಡಿದೆ ! ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲತಾಲೂಕಿನ ಮಳುಕುಂಟೆ ಗ್ರಾಮದಲ್ಲಿ ನೀಲಿ ನೊಣ ಹಿಡುಕ (ಬ್ಲೂ ಥ್ರೋಟೆಡ್​ ಬ್ಲೂ ಫ್ಲೈ ಕ್ಯಾಚರ್​) ಪತ್ತೆ ಯಾಗಿದೆ.

ವಲಸೆ ಋತುವಿನಲ್ಲಿ ಕರ್ನಾಟಕದ ಪಶ್ಚಿಮಟ್ಟ ಕಾಡುಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ನೀಲಿ ನೊಣ ಹಿಡುಕವು ಇದೀಗ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು ಸಹಜವಾಗಿ ಪಕ್ಷಿ ಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿದೆ. ಈ ನೀಲಿಗಲ್ಲದ ನೀಲಿ ನೊಣ ಹಿಡುಕಗಳು ಚಳಿಗಾಲದಲ್ಲಿ ಹಿಮಾಲಯದಿಂದ ಭಾರತದ ಪಶ್ಚಿಮಟ್ಟದ ಮತ್ತು ಪೂರ್ವಟ್ಟದ ಕಾಡುಗಳಿಗೆ ವಲಸೆಬರುತ್ತವೆ. ಮಲೇಶಿಯಾ, ವಿಯೆಟ್ನಾಂ, ಬಾಂಗ್ಲಾದೇಶ, ಥಾಯ್​ಲ್ಯಾಂಡ್​, ಶ್ರೀಲಂಕಾ ದೇಶಗಳಿಗು ವಲಸೆ ಹೋಗಲಿರುವ ವಿರಳ ನೀಲಿ ನೊಣ ಹಿಡುಕ ಪತ್ತೆ ಏಪ್ರಿಲ್​ನಲ್ಲಿ ಮೂಲ ಸ್ಥಾನಗಳಿಗೆ ಮರಳಲಿವೆ.

ಹಕ್ಕಿಗಳು 13-15 ಸೆಂ.ಮೀ ಗಾತ್ರವಿದ್ದು ಗಂಡು ಹಕ್ಕಿ ಘಾಡ ನೀಲಿ (ವೈಬ್ರೆಂಟ್​ ಬ್ಲೂ) ಬಣ್ಣ ಹೊಂದಿರುತ್ತವೆ, ಹೆಣ್ಣು ಮಂದವರ್ಣ ಹೊಂದಿರುತ್ತವೆ. ಮಳುಕುಂಟೆ ಭಾಗದಲ್ಲಿ ಗಂಡು ಮತ್ತು ಹೆಣ್ಣು ಎರಡು ನೊಣ ಹಿಡುಕ ಹಕ್ಕಿಗಳು ಒಂದೇ ಜಾಗದಲ್ಲಿ ದಾಖಲಾಗಿರುವುದು ವಿಶೇಷ ಎನ್ನುತ್ತಾರೆ ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್​.ನಾಯಕ.

ಸೀಗೆ ಮಾಳೆಯಲ್ಲಿ ವಿಶ್ರಾಂತಿ ಮಾಡುವ ಸಂದರ್ಭದಲ್ಲಿ ಈ ನೀಲಿಗಲ್ಲದ ನೀಲಿ ನೊಣ ಹಿಡುಕ ಜೀವವೃವಿಧ್ಯ ಸಂಶೋಧಕ ಮಂಜುನಾಥ ಎಸ್​.ನಾಯಕ, ಪಕ್ಷಿ ವೀಕ್ಷಕರಾದ ಎಸ್​.ಸುನಿಲ್​ಕುಮಾರ್​, ಸಿ.ರಘುಕುಮಾರ್​ ತಂಡದ ಕ್ಯಾಮೆರಾಕಣ್ಣಿಗೆ ಬಿದ್ದಿದೆ. ಇದೇ ತಂಡದ ಕನಕಪುರದ ಪಕ್ಷಿ ವೀಕ್ಷಕ ಎನ್​.ಹರೀಸ್​ ಹಕ್ಕಿಯ ಗುರುತನ್ನು ಖಚಿತ ಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net