

ಹಾವೇರಿ: ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಕ್ತನಿಧಿ ಘಟಕಗಳು ಅಥವಾ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ರಕ್ತನಿಧಿ ಘಟಕಗಳನ್ನು ಕೆಪಿಎಂಇ ಕಾಯ್ದೆಯಡಿ ಆನ್ಲೈನ್ ಪೋರ್ಟ್ಲ್ನಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ.
ನೋಂದಣಿ ಮಾಡದ ಸಂಸ್ಥೆಯವರ ವಿರುದ್ಧ ಕೆಪಿಎಂಇ ನಿಯಮಗಳ ಅನ್ವಯ ಸೂಕ್ತ ಕ್ರಮ ಜರುಗಿಸಲಾಗುವುದು. ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ಪ್ರಾರಂಭಿಸುವ ಮುನ್ನ ಕರ್ನಾಟಕ ವೈದ್ಯಕೀಯ ಅಧಿನಿಯಮ 2007, 2009 ಹಾಗೂ ತಿದ್ದುಪಡಿ ನಿಯಮ-2018ರ ಪ್ರಕಾರ ಕೆಪಿಎಂಇ ಕಾಯ್ದೆಯಡಿ ನೋಂದಣಿ ಮಾಡುವುದು ಕಡ್ಡಾಯವಾಗಿದೆ.
ಕೆಪಿಎಂಇ ತಿದ್ದುಪಡಿ ನಿಯಮ 2018ರ ನಿಯಮ-4ರಲ್ಲಿನ 18- ಕೆಟಗರಿಗಳ ಪೈಕಿ ಬ್ಲಡ್ ಬ್ಯಾಂಕ್ ಸಹ ಒಂದು ಕೆಟಗರಿಯಾಗಿದೆ.
ಕೆಪಿಎಂಇ ತಿದ್ದುಪಡಿ ನಿಯಮ-6 ಮತ್ತು ನಿಯಮ-7ರನ್ವಯ ಬ್ಲಡ್ ಬ್ಯಾಂಕ್ಗಳನ್ನು ಈ ಕೆಟಗರಿ ಅಡಿಯಲ್ಲಿ ಕೆಪಿಎಂಇ ಆನ್ಲೈನ್ ಪೋರ್ಟಲ್ನಲ್ಲಿ ನೋಂದಣಿ ಮಾಡುವುದು ಕಡ್ಡಾಯವಾಗಿದೆ ಎಂದು ಡಿಎಚ್ಒ ಡಾ.ಎಚ್.ಎಸ್. ರಾಘವೇಂದ್ರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.