ರಕ್ತದಾನ, ಹೃದಯ ತಪಾಸಣೆ ಶಿಬಿರ

hbr
Published on

ಹೆಬ್ರಿ: ಮುನಿಯಾಲು ಕಬಡ್ಡಿಪಟು ದಿ.ಪ್ರೀತಮ್ ಶೆಟ್ಟಿ ಸ್ಮರಣಾರ್ಥ ಭಾನುವಾರ ಪದ್ಮಾವತಿ ಕಲಾಮಂದಿರದಲ್ಲಿ ಹಿಂದು ಹೆಲ್ಪ್ ಲೈನ್ ಜನಸೇವಾ ಟ್ರಸ್ಟ್ ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ರಕ್ತದಾನ, ಹೃದಯ ತಪಾಸಣೆ ಶಿಬಿರ ಮತ್ತು ಅನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಣೆ ನಡೆಯಿತು.

ಉದ್ಯಮಿ ಗಿರೀಶ್ ಶೆಟ್ಟಿ ತೆಳ್ಳಾರು ಉದ್ಘಾಟಿಸಿದರು. ಹಿಂದು ಹೆಲ್ಪ್ ಲೈನ್ ಗೌರವಾಧ್ಯಕ್ಷ ಡಾ.ಸುದರ್ಶನ್ ಹೆಬ್ಬಾರ್, ಕೆಎಂಸಿ ಮಂಗಳೂರಿನ ವೈದ್ಯ ಡಾ.ದಿತೇಶ್ ಎಂ., ಮಣಿಪಾಲ ಕೆಎಂಸಿ ವೈದ್ಯ ಡಾ.ಗಣೇಶ್ ಮೋಹನ್, ಕಾಡುಹೊಳೆ ಜಂಗಮೇಶ್ವರ ಮಠದ ಅರ್ಚಕ ರಾಘವೇಂದ್ರ ಭಟ್, ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷ ಉಪೇಂದ್ರ ವಾಗ್ಲೆ, ಉದ್ಯಮಿ ಎಂ.ದಿನೇಶ್ ಪೈ, ಬಿಲ್ಲವ ಸಂಘ ಅಧ್ಯಕ್ಷ ಟಿ.ಮಂಜುನಾಥ್, ಉಡುಪಿ ಅಭಯಹಸ್ತ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಸತೀಶ್ ಸಾಲಿಯಾನ್, ಮುನಿಯಾಲು ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಧರ್ ಪೈ, ಲಯನ್ಸ್ ಕ್ಲಬ್ ಅಧ್ಯಕ್ಷ ಭುಜಂಗ ಶೆಟ್ಟಿ, ಸಿ.ಎ.ನಿತೇಶ್ ಶೆಟ್ಟಿ, ಉದ್ಯಮಿ ಹರೀಶ್ ಶೆಟ್ಟಿ ಪಡುಕೂಡೂರು, ಹಿಂದು ಹೆಲ್ಪ್ ಲೈನ್ ಜನಸೇವಾ ಟ್ರಸ್ಟ್ ಅಧ್ಯಕ್ಷ ರಾಜೇಶ್ ಶೆಟ್ಟಿ ಮುನಿಯಾಲು ಉಪಸ್ಥಿತರಿದ್ದರು. ಮುಟ್ಲುಪಾಡಿ ಸುಹಾಸ್ ಶೆಟ್ಟಿ ಸ್ವಾಗತಿಸಿದರು. ರಾಮಚಂದ್ರ ನಾಯಕ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net