ರಕ್ತದಾನ ಶ್ರೇಷ್ಟ ಕಾರ್ಯ: ಪ್ರೊ.ಎಂ.ವೆಂಕಟೇಶ್ವರಲು

Blood_Camp_02
Published on

ತುಮಕೂರು: ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡುವ ಮೂಲಕ ಪ್ರಾಣ ಉಳಿಸುವುದು ವ ಶ್ರೇಷ್ಟ ಕಾರ್ಯ ಎನಿಸಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು.

ವಿಶ್ವವಿದ್ಯಾಲಯದ ಯುವ ರೆಡ್‌ಕ್ರಾಸ್ ಘಟಕವು ಗುರುವಾರ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೌಷ್ಟಿಕ ಆಹಾರ ಸೇವಿಸುವುದರಿಂದ ದೇಹದ ಆರೋಗ್ಯ ಉತ್ತಮವಾಗಿರಲಿದ್ದು ಸದೃಢವಂತರು ರಕ್ತದಾನ ಮಾಡಬಹುದಾಗಿದ್ದು ಪ್ರಾಣ ಉಳಿಸುವ ಅರ್ಹ ನಾಗರಿಕರಾಗುತ್ತೇವೆ ಎಂದರು.

ಶಾರೀರಿಕ ಬೆಳವಣಿಗೆಗಾಗಿ ಆಹಾರ, ಮಾನಸಿಕ ಸದೃಢತೆಗಾಗಿ ಯೋಗ ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ರಕ್ತದಾನ ಶಿಬಿರದಲ್ಲಿ ವಿದ್ಯಾರ್ಥಿಗಳು ಉತ್ಸುಕತೆಯಿಂದ ಭಾಗವಹಿಸುತ್ತಿದ್ದಾರೆ. ಇಂತಹ ಸಮಾಜಮುಖಿ ಕಾರ್ಯಗಳನ್ನು ಮಾಡುವವರು ಎಂದಿಗೂ ಅಮರರಾಗಿರುತ್ತಾರೆ ಎಂದು ತಿಳಿಸಿದರು.

ಮನುಷ್ಯನಿಗೆ ಬಹಳಷ್ಟು ಅಗತ್ಯಗಳಿರುತ್ತವೆ. ಮನಃಪೂರ್ವಕವಾಗಿ ತೃಪ್ತಿಪಡಿಸುವುದು ಆಹಾರ ಮಾತ್ರ. ಗುಣಮಟ್ಟದ ಆಹಾರ ಸೇವನೆ ಉತ್ತಮ ಆರೋಗ್ಯಕ್ಕೆ ಸಹಕಾರಿ ಎಂದು ವಿವಿ ವಿಜ್ಞಾನ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಡಾ. ಎಸ್.ಶ್ರೀನಿವಾಸ್ ಹೇಳಿದರು.

ರಕ್ತದಾನ ಶಿಬಿರದಲ್ಲಿ ಒಟ್ಟಾರೆಯಾಗಿ 100ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹವಾಯಿತು.

ವಿವಿ ವಿಜ್ಞಾನ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಪ್ರಾಧ್ಯಾಪಕ ಡಾ. ಬಿ.ಎಲ್.ಮುಕುಂದಪ್ಪ , ಯುವ ರೆಡ್‌ಕ್ರಾಸ್ ಘಟಕದ ಸಮನ್ವಯಾಧಿಕಾರಿ ಡಾ. ಡಿ. ಪೂರ್ಣಿಮಾ, ಎಚ್‌ಡಿಎಫ್‌ಸಿ ಬ್ಯಾಂಕ್ ಬ್ರಾಂಚ್ ಆಪರೇಷನ್ ಮ್ಯಾನೇಜರ್ ವಿಜಯ್ ಕುಮಾರ್, ವಿಶ್ವನಾಥ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net