

ವಿಜಯವಾಣಿ ಸುದ್ದಿಜಾಲ ಕೊಕ್ಕಡ
ಅರಸಿನಮಕ್ಕಿಯ ಪ್ರಾ ಕೃ ಪ. ಸ. ಸಂ ನೇತೃತ್ವದಲ್ಲಿ ವಿವಿಧ ಸಂ ಸಂಸ್ಥೆಗಳ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ಸಂದ ಸಭಾಭವನದಲ್ಲಿ ನಡೆಯಿತು. ಉದ್ಯಮಿ ಧರ್ಣಪ್ಪ ಗೌಡ ಉದ್ಘಾಟಿಸಿದರು.
ಸಂದ ಅಧ್ಯಕ್ಷ ರಾಘವೇಂದ್ರ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ನ ಸದಸ್ಯ ಉದಯಶಂಕರ್ ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು.
ಸೇವಾಧಾಮದ ಸ್ಥಾಪಕ ಕೆ.ವಿನಾಯಕ, ಡಾ.ಹರ್ಷಿತ ಸುವಿನ್, ರಕ್ತನಿಧಿ ವಿಭಾಗದ ಜಿಲ್ಲಾ ಸಂಯೋಜಕ ಪ್ರವಿಣ್ ಕುಮಾರ್, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಚಂದ್ರ ರಾವ್, ಶಿಬಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರತ್ನ ಬಿ., ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ನ ಮೆಡಿಕಲ್ ಆಫೀಸರ್ ಡಾ.ಕೆ.ಸೀತಾರಾಮ್ ಭಟ್ ಉಪಸ್ಥಿತರಿದ್ದರು. ನಿರ್ದೇಶಕ ಮುರಳೀಧರ್ ಶೆಟ್ಟಿಗಾರ್ ಸ್ವಾಗತಿಸಿದರು. ಸೇವಾಧಾಮದ ಸಿಬ್ಬಂದಿ ಮೋಹನ್ ನಿರೂಪಿಸಿದರು. ಸಂದ ಅಧ್ಯಕ್ಷ ರಾಘವೇಂದ್ರ ನಾಯಕ್ ವಂದಿಸಿದರು.