ರಕ್ತದಾನ ಮೂಲಕ ಹುಟ್ಟುಹಬ್ಬ ಆಚರಣೆ-ಸಚಿವ ದಿನೇಶ್ ಗುಂಡೂರಾವ್

Blood donation camp - 5
Published on

ಬೆಂಗಳೂರು: ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ ಅಂಗವಾಗಿ ಆರೋಗ್ಯ ಸೌಧದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಕ್ತದಾನ ಮಾಡುವ ಮೂಲಕ ತಮ್ಮ 54ನೇ ಹುಟ್ಟುಹಬ್ಬ ಆಚರಿಸಿಕೊಂಡರು.

ತಮ್ಮ ನಿವಾಸದ ಬಳಿ ಬೆಳಗ್ಗೆಯಿಂದಲೇ ಜಮಾಯಿಸಿದ್ದ ಸಹಸ್ರಾರು ಅಭಿಮಾನಿಗಳಿಂದ ಶುಭಾಶಯ ಸ್ವೀಕರಿಸಿದರು. ಹಾರ-ತುರಾಯಿ, ಉಡುಗೊರೆ ನೀಡಿ ಅದ್ದೂರಿಯಾಗಿ ಆಚರಿಸುವ ಬದಲು ಅಂಗಾಂಗ ದಾನ ಹಾಗೂ ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ಉಳಿಸುವ ಸಾರ್ಥಕ ಕಾರ್ಯ ಮಾಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದರು. ನಂತರ ಆರೋಗ್ಯ ಸೌಧಕ್ಕೆ ತೆರಳಿ ರಕ್ತದಾನ ಮಾಡಿದರು. ಇದರಿಂದ ಪ್ರೇರಿತರಾಗಿ ಅಭಿಮಾನಿಗಳು ಕೂಡ ರಕ್ತದಾನ ಮಾಡಿದರು. 60 ಯೂನಿಟ್ ರಕ್ತ ಸಂಗ್ರಹವಾಯಿತು.

ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ನವೀನ್ ಭಟ್ ಸೇರಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯೂ ರಕ್ತದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net